Video:‌ ಮದುವೆ ಸಂಭ್ರಮಾಚರಣೆ ವೇಳೆ ನೋಟಿನ ಸುರಿಮಳೆ….! ಆಯ್ದುಕೊಳ್ಳಲು ಮುಗಿಬಿದ್ದ ಜನ

ಮದುವೆ ಸಂಭ್ರಮದ ವೇಳೆ ಮನೆಯ ಮೇಲಿಂದ ಹಣದ ಮಳೆ ಸುರಿಸಿರುವ ಘಟನೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

ವಿವಾಹ ಕಾರ್ಯಕ್ರಮದ ವೇಳೆ ಗ್ರಾಮದ ಮಾಜಿ ಸರಪಂಚ್‌ ಒಬ್ಬರು ತಮ್ಮ ಮನೆಯ ಮೇಲಿಂದ ನೋಟುಗಳನ್ನು ಎಸೆದಿದ್ದು ಹಣದ ಮಳೆ ಸುರಿದಂತಹ ಪರಿಸ್ಥಿತಿ ಉಂಟಾಗಿತ್ತು.

ಗುಜರಾತಿನ ಕೇಕ್ರಿ ತಹಸಿಲ್‌ನ ಅಗೋಲ್ ಗ್ರಾಮದ ಮಾಜಿ ಸರಪಂಚ್ ಮನೆಯ ಕೆಳಗೆ ಜನ ಗುಂಪು ಸೇರುತ್ತಿದ್ದಂತೆ 500 ರೂಪಾಯಿ ಕರೆನ್ಸಿ ನೋಟುಗಳನ್ನು ಸುರಿಯುತ್ತಿರುವುದು ಕಂಡುಬಂದಿದೆ.

ಮಾಜಿ ಸರಪಂಚ್ ನ ಸೋದರಳಿಯನ ಮದುವೆಯ ಸಂಭ್ರಮಾಚರಣೆಯ ಅಂಗವಾಗಿ ಹಣವನ್ನು ಸುರಿಯಲಾಯಿತು.

ಮಾಜಿ ಸರಪಂಚ್ ಕರೀಂ ಯಾದವ್ ಅವರ ಸೋದರಳಿಯ ಅವರು ಗ್ರಾಮದಲ್ಲಿ ಮದುವೆಯ ಮೆರವಣಿಗೆಯಲ್ಲಿದ್ದಾಗ ಮಾಜಿ ಸರಪಂಚ್ ಮತ್ತು ಅವರ ಕುಟುಂಬ ಸದಸ್ಯರು ಛಾವಣಿಯ ಮೇಲಕ್ಕೆ ಹೋಗಿ ಸಂಭ್ರಮಾಚರಣೆಯನ್ನು ವೀಕ್ಷಿಸಲು ನೆರೆದಿದ್ದ ಜನರ ಮೇಲೆ ಹಣದ ಸುರಿಮಳೆಗೈದರು.

ವೈರಲ್ ವೀಡಿಯೊವೊಂದರಲ್ಲಿ, ಜೋಧಾ ಅಕ್ಬರ್‌ನ ಬಾಲಿವುಡ್ ಹಾಡು “ಅಜೀಮ್-ಒ-ಶಾನ್ ಶೆಹೆನ್‌ಶಾ” ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವಂತೆ ಮನೆಯ ಕೆಳಗೆ ನಿಂತಿರುವ ಜನರು ತಮ್ಮ ಮೇಲೆ ಬೀಳುವ ನೋಟುಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read