ಬೆಂಗಳೂರು : ಮಾಜಿ ಪ್ರಧಾನಿ , ಜೆಡಿಎಸ್ ವರಿಷ್ಟ ಹೆಚ್ ಡಿ ದೇವೇಗೌಡ ಅವರು ಏರ್ ಇಂಡಿಯಾ ವಿಮಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಗಳ ಜೊತೆ ದೇವೇಗೌಡರು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಹೌದು, ದೇವೇಗೌಡರು ನಾಳೆಗೆ ಮೇ (18) 92 ವಸಂತಗಳನ್ನು ಪೂರ್ಣಗೊಳಿಸಿ 93 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆ ಏರ್ ಇಂಡಿಯಾ ದೆಹಲಿ-ಬೆಂಗಳೂರು ಪ್ರಯಾಣದ ವೇಳೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿ ಶುಭಾಶಯ ಕೋರಿದೆ.
ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ
— Janata Dal Secular (@JanataDal_S) May 17, 2025
ಶ್ರೀ @H_D_Devegowda ಅವರ ಜನ್ಮದಿನವನ್ನು ಏರ್ ಇಂಡಿಯಾ ವಿಶೇಷವಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸಿತು.
ದೆಹಲಿ – ಬೆಂಗಳೂರು ವಿಮಾನ ಪ್ರಯಾಣದ ವೇಳೆ 35 ಸಾವಿರ ಅಡಿ ಎತ್ತರದಲ್ಲಿ ಆಚರಿಸಿ ಏರ್ ಇಂಡಿಯಾ ಪರವಾಗಿ ಸಿಬ್ಬಂದಿಗಳು ದೇವೇಗೌಡರಿಗೆ ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು. pic.twitter.com/mcwLr03hOi
You Might Also Like
TAGGED:ಏರ್ ಇಂಡಿಯಾ ವಿಮಾನ