‘ಗೌರಿ ಲಂಕೇಶ್’ ಕೊಲೆ ಆರೋಪಿಯನ್ನು ಭೇಟಿಯಾದ ಮಾಜಿ ಸಂಸದ ಪ್ರತಾಪ್ ಸಿಂಹ ; ಕಾಂಗ್ರೆಸ್ ಕಿಡಿ.!

ಬೆಂಗಳೂರು : ಮಾಜಿ ಸಂಸದ ಪ್ರತಾಪ್ ಸಿಂಹ ಗೌರಿ ಲಂಕೇಶ್ ಕೊಲೆ ಆರೋಪಿಯನ್ನು ಭೇಟಿಯಾಗಿದ್ದಾರೆ ಎನ್ನಲಾಗಿದ್ದು, ಈ ಕುರಿತು ಕಾಂಗ್ರೆಸ್ ಕಿಡಿಕಾರಿದೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ ಹಂಚಿಕೊಂಡ ಕಾಂಗ್ರೆಸ್ ‘ಸೈದ್ದಾಂತಿಕ ಬಿನ್ನಾಭಿಪ್ರಾಯದ ಒಂದೇ ಕಾರಣಕ್ಕೆ ಸಂಘಟಿತ ಸಂಚು ನಡೆಸಿ ಹತ್ಯೆ ಮಾಡುವುದು ಭಯೋತ್ಪಾದಕ ಕೃತ್ಯಕ್ಕೆ ಸಮನಾಗುತ್ತದೆ. ಐಸಿಸ್, ಹಿಜ್ಬುಲ್ ಮುಜಾಹಿದ್ದಿನ್ ನಂತಹ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವವರಿಗೂ ಗೌರಿ ಲಂಕೇಶ್ ಹಂತಕರನ್ನು ಬೆಂಬಲಿಸುವವರಿಗೂ ಯಾವುದೇ ವ್ಯತ್ಯಾಸವಿಲ್ಲ. ಕೊಲೆಗಾರನೊಂದಿಗೆ ಕುಶಲೋಪರಿ ನಡೆಸಿ, ಅದನ್ನು ಸಾಧನೆ ಎಂಬಂತೆ ಹೆಮ್ಮೆಯಿಂದ ಹೇಳಿಕೊಳ್ಳುವ ಭಯೋತ್ಪಾದಕರ ಬೆಂಬಲಿಗ ಎಂದರೆ ತಪ್ಪಾಗುತ್ತದೆಯೇ? ಬಾಡಿಗೆ ಭಾಷಣಕಾರನಿಗೆ ವಿನಾಯಕ ಬಾಳಿಗಾ ಹಂತಕ ಸ್ನೇಹಿತ, ಮಾಜಿ ಬಾಡಿಗೆ ಬರಹಗಾರನಿಗೆ ಗೌರಿ ಲಂಕೇಶ್ ಹಂತಕ ಸ್ನೇಹಿತ. ಹಂತಕರ ಬೆಂಬಲಕ್ಕೆ ನಿಂತಿರುವ ಇಂತಹವರಿಗೆ “ಅರ್ಬನ್ ಟೆರರಿಸ್ಟ್” ಎಂಬ ಹೆಸರು ಸೂಕ್ತವಾದೀತು! ಎಂದು ಕಾಂಗ್ರೆಸ್ ಕಿಡಿಕಾರಿದೆ.

https://twitter.com/INCKarnataka/status/1823266134592032961

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read