ಕುಟುಂಬ ಸದಸ್ಯರೊಂದಿಗೆ ತೆಲಂಗಾಣ ಜ್ಯೋತಿಷಿಯನ್ನು ಭೇಟಿಯಾದ H.D. ರೇವಣ್ಣ…! ವಿಡಿಯೋ ‘ವೈರಲ್’

HD Revanna

ಮಾಜಿ ಸಚಿವ ಎಚ್.ಡಿ. ರೇವಣ್ಣನವರಿಗೆ ದೇವರು ಹಾಗೂ ಜ್ಯೋತಿಷ್ಯ ಕುರಿತಂತೆ ಅಪಾರ ನಂಬಿಕೆ. ಸದಾ ಕಾಲ ತಮ್ಮೊಂದಿಗೆ ನಿಂಬೆಹಣ್ಣು ತೆಗೆದುಕೊಂಡು ಹೋಗುವ ರೇವಣ್ಣ ಈ ಕಾರಣಕ್ಕಾಗಿಯೇ ಸದನದಲ್ಲಿ ತಮಾಷೆಗೂ ಗುರಿಯಾಗಿದ್ದಾರೆ. ಇದೀಗ ರೇವಣ್ಣನವರು ಕುಟುಂಬ ಸದಸ್ಯರ ಜೊತೆ ಜ್ಯೋತಿಷಿ ಒಬ್ಬರನ್ನು ಭೇಟಿಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತೆಲಂಗಾಣದ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರ ನಿವಾಸಕ್ಕೆ ಪತ್ನಿ ಭವಾನಿ, ಪುತ್ರರಾದ ಸಂಸದ ಪ್ರಜ್ವಲ್ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ಅವರ ಜೊತೆ ಭೇಟಿ ನೀಡಿದ್ದ ರೇವಣ್ಣನವರು ಆಶೀರ್ವಾದ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ರೇವಣ್ಣ ಹಾಗೂ ಪತ್ನಿ ಭವಾನಿ ಪರಸ್ಪರ ಹಾರ ಬದಲಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿದ್ದು, ಸ್ವತಃ ರೇವಣ್ಣ ಅವರು ಸಹ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಾಗೂ ಪುತ್ರ ಪ್ರಜ್ವಲ್ ಗೆಲುವಿಗೆ ಪ್ರಾರ್ಥಿಸಿ ರೇವಣ್ಣ, ಜ್ಯೋತಿಷಿ ಮೊರೆ ಹೋಗಿರಬಹುದು ಎಂದು ಹೇಳಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read