ಯುವತಿಯರ ಸ್ಕರ್ಟ್ ವಿಡಿಯೋ ತೆಗೆದ ಡಿಸ್ನಿ ವರ್ಲ್ಡ್ ಉದ್ಯೋಗಿ; ಬೆಚ್ಚಿಬೀಳಿಸುವಂತಿದೆ ಈ ಸ್ಟೋರಿ

ಮಾಜಿ ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿ ಮಹಿಳಾ ಗ್ರಾಹಕರ ಸ್ಕರ್ಟ್ ನ ವಿಡಿಯೋವನ್ನು ಗುಟ್ಟಾಗಿ ತೆಗೆದ ಆರೋಪವನ್ನು ಎದುರಿಸುತ್ತಿದ್ದಾರೆ, ಕಳೆದ ಆರು ವರ್ಷಗಳಲ್ಲಿ ತಾನು ಇದನ್ನು 500 ಕ್ಕೂ ಹೆಚ್ಚು ಬಾರಿ ಮಾಡಿದ್ದೇನೆ ಎಂದು ತನಿಖಾಧಿಕಾರಿಗಳಿಗೆ ಈ ಉದ್ಯೋಗಿ ಹೇಳಿದ್ದಾನೆ.

ಜಾರ್ಜ್ ಡಯಾಜ್ ವೆಗಾ (26) ಎಂಬಾತ ಆರೋಪಿ. ಈತ ಫ್ಲೋರಿಡಾದ ಡಿಸ್ನಿ ವರ್ಲ್ಡ್‌ನ ಹಾಲಿವುಡ್ ಸ್ಟುಡಿಯೋಸ್ ಥೀಮ್ ಪಾರ್ಕ್‌ನೊಳಗೆ ಕೆಲಸ ಮಾಡುತ್ತಿದ್ದ. ಮಹಿಳಾ ಗ್ರಾಹಕರ ಸ್ಕರ್ಟ್ ನ ವಿಡಿಯೋವನ್ನು ಗುಟ್ಟಾಗಿ ತೆಗೆದ ಆರೋಪ ಎದುರಿಸುತ್ತಿದ್ದಾನೆ.

ಇದು ಮೂರನೇ ಹಂತದ ಅಪರಾಧವಾಗಿದ್ದು, ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಆರೆಂಜ್ ಕೌಂಟಿ ಶೆರಿಫ್‌ನ ಪತ್ತೆದಾರರು ಸಲ್ಲಿಸಿದ ನ್ಯಾಯಾಲಯದ ದಾಖಲೆಗಳ ಪ್ರಕಾರ, 18 ವರ್ಷ ವಯಸ್ಸಿನ ಯುವತಿಯ ಸ್ಕರ್ಟ್‌ನ ವೀಡಿಯೊವನ್ನು ಶೂಟ್ ಮಾಡುತ್ತಿದ್ದ ಈತ.

ಈತನನ್ನು ಮಾರ್ಚ್ 31 ರಂದು ಬಂಧಿಸಲಾಯಿತು ಮತ್ತು $ 2,500 ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read