ಬೆಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ(46) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಪುತ್ರಿಯ ಸಾವಿನ ಸುದ್ದಿ ತಿಳಿದ ವೀರಪ್ಪ ಮೊಯ್ಲಿ ಛತ್ತಿಸ್ಗಢದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಹಂಸ ಮೊಯ್ಲಿ ಭರತನಾಟ್ಯ ಕಲಾವಿದರಾಗಿದ್ದರು. ಪ್ರಾಯೋಗಿಕ ನೃತ್ಯ ಸಂಯೋಜಕರಾಗಿದ್ದ ಅವರು ತಮಿಳು ಸಿನಿಮಾ ‘ಶೃಂಗಾರಂ’ನಲ್ಲಿ ಅಭಿನಯಿಸಿದ್ದರು.
ಅನಾರೋಗ್ಯದ ಕಾರಣ ನಿನ್ನೆ ಸಂಜೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೀರಪ್ಪ ಮೊಯ್ಲಿಯವರ ಮೂರನೇ ಪುತ್ರಿ ಹಂಸ ಮೊಯ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಪ್ರದರ್ಶನ ನೀಡಿದ್ದರು. ನಾಳೆ ಬೆಳಗ್ಗೆ ಹಂಸ ಮೊಯ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು.
ಬಿ.ಎಸ್.ವೈ. ಸಂತಾಪ:
ಹಂಸ ಮೊಯ್ಲಿ ನಿಧನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ನಿಧನದ ಸುದ್ದಿ ಅತೀವ ದುಃಖ ಉಂಟು ಮಾಡಿದೆ. ದೇವರು ಅಗಲಿದ ಚೇತನಕ್ಕೆ ಸದ್ಗತಿ ನೀಡಲಿ. ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
https://twitter.com/BSYBJP/status/1807374622788096316