BREAKING : ಮಾಜಿ ಸಚಿವ ‘ಅರವಿಂದ್ ಲಿಂಬಾವಳಿ’ಗೆ ಮಾತೃ ವಿಯೋಗ.!

ಬೆಂಗಳೂರು : ಬಿಜೆಪಿ ಮಾಜಿ ಶಾಸಕ, ಮಾಜಿ ಸಚಿವ ಅರವಿಂದ್ ಲಿಂಬಾವಳಿ ತಾಯಿ ಭೀಮಾಬಾಯಿ ಲಿಂಬಾವಳಿ ನಿಧನರಾಗಿದ್ದಾರೆ.

ಈ ಕುರಿತು ಅರವಿಂದ್ ಲಿಂಬಾವಳಿ ಪೋಸ್ಟ್ ಹಂಚಿಕೊಂಡಿದ್ದು, ”84 ವರ್ಷದ ನನ್ನ ಮಾತೃಶ್ರೀಯವರಾದ ಶ್ರೀಮತಿ ಭೀಮಾಬಾಯಿ ವೆಂಕಟರಾವ ಲಿಂಬಾವಳಿ ಅವರು ಬಾಗಲಕೋಟೆಯ ನಮ್ಮ ಸ್ವಗೃಹದಲ್ಲಿ ಇಂದು ಬೆಳಗಿನ ಜಾವ 4:00 ಗೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇನೆ. ಅವರ ಅಂತ್ಯಕ್ರಿಯೆ ಇಂದು ಸಂಜೆ 7:30 ಗಂಟೆಗೆ ನೆರವೇರಲಿದೆ”.

”ಅವರ ಪ್ರೀತಿ, ಮಮತೆ ಮತ್ತು ಆಶೀರ್ವಾದ ನಮ್ಮ ಹೃದಯದಲ್ಲಿ ಸದಾ ಹಸಿರಾಗಿರುತ್ತದೆ. ಜೀವನದಲ್ಲಿ ಅವರು ಕಲಿಸಿದ ಸರಳತೆ ಮತ್ತು ನೀತಿ ಪಾಠಗಳು ನನಗೆ ಸನ್ಮಾರ್ಗದಲ್ಲಿ ನಡೆಯಲು ಸದಾ ಪ್ರೇರಣೆ ನೀಡುತ್ತಿರುತ್ತವೆ.
ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಕೋರುತ್ತೇನೆ” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read