ಲಿಂಗ ಪರಿವರ್ತನೆಗೆ ಮುಂದಾದ ಪಶ್ಚಿಮ ಬಂಗಾಳದ ಮಾಜಿ ಸಿಎಂ ಪುತ್ರಿ…!

Former Bengal CM's daughter to undergo sex-change surgery | Loktej Regional News - Loktej English

ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ ಅವರು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಬಳಿಕ ತನ್ನ ಹೆಸರನ್ನು ಸುಚೇತನ್ ಎಂದು ಬದಲಾಯಿಸಿಕೊಳ್ಳಲಿದ್ದಾರೆ.

“ಮಾನಸಿಕವಾಗಿ ಟ್ರಾನ್ಸ್ ಮ್ಯಾನ್ ಆಗಿದ್ದೇನೆ, ಈಗ ದೈಹಿಕವಾಗಿ ಅದೇ ರೀತಿ ಇರಲು ಬಯಸುತ್ತೇನೆ. ನನ್ನ ಹೆಸರನ್ನು ಸಹ ಬದಲಾಯಿಸಲು ಬಯಸುತ್ತೇನೆ, ಕಾನೂನು ಅಂಶಗಳನ್ನು ಸಮಾಲೋಚಿಸಿದ್ದೇನೆ. ವಯಸ್ಸಿನಲ್ಲಿದ್ದಾಗಿನಿಂದ ನಾನು ಮಾನಸಿಕವಾಗಿ ಟ್ರಾನ್ಸ್ ಮ್ಯಾನ್ ಎಂದು ಗುರುತಿಸಲು ಪ್ರಾರಂಭಿಸಿದೆ. ಇದರಿಂದಾಗಿ ನಾನು ಸಾಕಷ್ಟು ಅವಮಾನವನ್ನು ಎದುರಿಸಿದ್ದೇನೆ. ಅದಕ್ಕಾಗಿಯೇ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ” ಎಂದು ಅವರು ಹೇಳಿದರು.

ತನ್ನ ಕುಟುಂಬದ ಗುರುತನ್ನು ತನ್ನ ವೈಯಕ್ತಿಕ ಗುರುತಿನೊಂದಿಗೆ ಬೆರೆಸಬೇಡಿ ಎಂದು ಅವರು ಜನರಿಗೆ ಮನವಿ ಮಾಡಿದರು. ನಾನು ಟ್ರಾನ್ಸ್ ಮ್ಯಾನ್ ಎಂದು ಯಾವಾಗಲೋ ತಿಳಿದಿದ್ದೆ ಮತ್ತು ಈ ಬಗ್ಗೆ ನನ್ನ ತಂದೆಯೊಂದಿಗೆ ಮುಕ್ತ ಚರ್ಚೆ ನಡೆಸಿದ್ದೇನೆ. ಈ ಜುಲೈ 1 ರಂದು ನಾನು 42 ನೇ ವರ್ಷಕ್ಕೆ ಕಾಲಿಡುತ್ತೇನೆ. ಇದು ನನ್ನ ನಿರ್ಧಾರ, ನನ್ನ ತಂದೆ ಮತ್ತು ನಾನು ಯಾವಾಗಲೂ ಪ್ರಗತಿಪರರು ಎಂದಿದ್ದಾರೆ. ಇತ್ತೀಚೆಗೆ ನಡೆ ಎಲ್‌ಜಿಬಿಟಿಕ್ಯೂ ಕಾರ್ಯಾಗಾರದಲ್ಲಿ ಸುಚೇತನಾ ಅವರು ಭಾಗವಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read