7 ಸಾವಿರ ಎಕರೆ ಅರಣ್ಯ ಮರು ವಶಕ್ಕೆ: ಸಚಿವ ಈಶ್ವರ್ ಖಂಡ್ರೆ ಮಾಹಿತಿ

ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಕಂಪನಿಗಳಿಗೆ ಲೀಸ್ ನೀಡಿದ್ದ 7000 ಎಕರೆ ಅರಣ್ಯ ಪ್ರದೇಶ ಮರುವಶಕ್ಕೆ ಸಿದ್ಧತೆ ನಡೆದಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಲೀಸ್ ನೀಡಿದ್ದ ಅರಣ್ಯ ಪ್ರದೇಶವನ್ನು ವಾಪಸ್ ಪಡೆಯಲಾಗುವುದು. ಬಹುದೊಡ್ಡ ಕಂಪನಿಗಳ ವಶದಲ್ಲಿ ಈ ಅರಣ್ಯ ಪ್ರದೇಶಗಳು ಇವೆ. ಶೇಕಡ 95 ರಷ್ಟು ಭಾಗ ಅರಣ್ಯ ಪ್ರದೇಶ ಮೈಸೂರು, ಮಡಿಕೇರಿ, ಚಾಮರಾಜನಗರ ಜಿಲ್ಲೆಗಳಲ್ಲಿದ್ದು, ಸುಮಾರು 7 ಸಾವಿರ ಎಕರೆಯಷ್ಟು ಅರಣ್ಯ ಭಾಗವನ್ನು ವಶಕ್ಕೆ ಪಡೆಯಬೇಕಿದೆ ಎಂದು ತಿಳಿಸಿದ್ದಾರೆ.

ಲೀಸ್ ನೀಡಿದ ಅರಣ್ಯ ಪ್ರದೇಶದ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಮುಂದಿನ ಆರು ತಿಂಗಳಲ್ಲಿ ಇವನ್ನು ಮರುವಶಕ್ಕೆ ಪಡೆಯಲಾಗುತ್ತದೆ ಎಂದರು.

ಬಂಡಿಪುರ ಅರಣ್ಯದಲ್ಲಿನ ರಸ್ತೆ ಮಾರ್ಗದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ಕೇರಳಕ್ಕೆ ಹೋಗಲು ಅವಕಾಶ ನೀಡಲಾಗಿದ್ದು, ಇದು ಮುಂದುವರೆಯಲಿದೆ. ವೈದ್ಯಕೀಯ ತುರ್ತು ಪರಿಸ್ಥಿತಿ ಸೇರಿ ಕೆಲವು ವಿಶೇಷ ಸಂದರ್ಭದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬಂಡಿಪುರದಲ್ಲಿ ರೈಲು ಮಾರ್ಗ, ಮೇಲ್ಸೇತುವೆ ನಿರ್ಮಾಣ ಬಗ್ಗೆ ಸಮೀಕ್ಷೆ ಆಗಿಲ್ಲ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read