ಜನವರಿ 24ರಂದು ರಾಜ್ಯಾದ್ಯಂತ ತೆರೆ ಕಂಡಿದ್ದ ಚಂದ್ರಮೋಹನ್ ನಿರ್ದೇಶನದ ‘ಫಾರೆಸ್ಟ್’ ಚಿತ್ರ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದ್ದು, ಮೂರನೇ ವಾರವು ಹೌಸ್ ಫುಲ್ ಆಗಿದೆ. ಈ ಸಿನಿಮಾ ಪ್ರೇಕ್ಷಕರನ್ನು ಹೊಟ್ಟೆ ಉಣ್ಣಾಗುವಂತೆ ನಕ್ಕು ನಗಿಸಿದ್ದು, ರಂಗಾಯಣ ರಘು ಹಾಗೂ ಚಿಕ್ಕಣ್ಣ ಅವರ ನಟನೆಗೆ ಫಿದಾ ಆಗಿದ್ದಾರೆ.
ಈ ಚಿತ್ರದಲ್ಲಿ ಚಿಕ್ಕಣ್ಣ ಸೇರಿದಂತೆ ಅನಿಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಸುನಿಲ್ ಕುಮಾರ್, ತೆರೆ ಹಂಚಿಕೊಂಡಿದ್ದು, ಎನ್ ಎಮ್ ಕಾಂತರಾಜ್ ತಮ್ಮ n.m.k ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ಸತ್ಯಶೌರ್ಯಸಾಗರ್ ಸಂಭಾಷಣೆ ಹಾಗೂ ಡಾ. ರವಿವರ್ಮ ಸಾಹಸ ನಿರ್ದೇಶನವಿದೆ.