ಲಕ್ಷ್ಮಿದೇವಿಯ ʼಅನುಗ್ರಹʼಕ್ಕೆ ಶುಕ್ರವಾರದಂದು ತಪ್ಪದೇ ಮಾಡಿ ಈ ಕೆಲಸ

ಲಕ್ಷ್ಮಿದೇವಿಗೆ ಶುಕ್ರವಾರ ಬಹಳ ಪ್ರಿಯವಾದ ದಿನ. ಈ ದಿನ ನೀವು ಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿದರೆ, ಅಂದು ಆಕೆಗೆ ಇಷ್ಟವಾದ ಕೆಲಸಗಳನ್ನು ಮಾಡಿದರೆ ಆಕೆಯ ಅನುಗ್ರಹ ದೊರೆತು ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ಶುಕ್ರವಾರದಂದು ನೀವು ತಪ್ಪದೇ ಲಕ್ಷ್ಮಿಗೆ ಇಷ್ಟವಾಗುವಂತಹ ಈ ಕೆಲಸಗಳನ್ನು ಮಾಡಿ.

-ಪ್ರತಿದಿನ ದೇವರಿಗೆ ದೀಪ ಬೆಳಗುತ್ತೇವೆ. ಆದರೆ ಶುಕ್ರವಾರದಂದು ತಪ್ಪದೇ ಹಸುವಿನ ತುಪ್ಪದಿಂದ ದೀಪ ಬೆಳಗಿ.

-ಶುಕ್ರವಾರದಂದು ತಪ್ಪದೇ ಯಾವುದಾದರೂ ಪ್ರಾಣಿ, ಪಕ್ಷಿಗಳಿಗೆ ಆಹಾರಗಳನ್ನು ನೀಡಿ.

-ಶುಕ್ರವಾರದಂದು ತುಳಸಿ ಕಟ್ಟೆಗೆ ತುಪ್ಪದ ದೀಪದಿಂದ ದೀಪಾರಾದನೆ ಮಾಡಿ.

-ಶುಕ್ರವಾರದಂದು ಮನೆಯ ಮುಂದೆ ರಂಗೋಲಿ ಹಾಕಬೇಕು. ಮತ್ತು ಹೊಸ್ತಿಲನ್ನು ಅರಶಿನ, ಕುಂಕುಮ, ಹೂಗಳಿಂದ ಅಲಂಕರಿಸಿ ಪೂಜೆ ಮಾಡಬೇಕು.

-ಶುಕ್ರವಾರ ಸಂಜೆಯ ವೇಳೆ ಮನೆಯ ಬಾಗಿಲ ಬಳಿ ಕಸ, ಧೂಳು, ಕೊಳಕು ಇರದಂತೆ ಸ್ವಚ್ಚ ಮಾಡಿ.

-ಶುಕ್ರವಾರ ಮಹಾಲಕ್ಷ್ಮಿಯ ಜೊತೆಗೆ ಗಣೇಶ ಮತ್ತು ವಿಷ್ಣುವಿನ ಪೂಜೆ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read