ರಾಜ್ಯ ಸರ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಇದು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ.
ಸರ್ಕಾರದ ಆದೇಶದಂತೆ ಹಿರಿಯ ಪತ್ರಕರ್ತೆ ಬೆಂಗಳೂರಿನ ಆಯೇಷಾ ಖಾನಂ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಸದಸ್ಯರಾಗಿ ಹಿರಿಯ ಪತ್ರಕರ್ತ ಚಿತ್ರದುರ್ಗದ ಎಂ.ಎನ್. ಅಹೋಬಳಪತಿ, ಹಿರಿಯ ಪತ್ರಿಕಾ ಛಾಯಾಗ್ರಾಹಕ ಬೆಂಗಳೂರಿನ ಕೆ. ವೆಂಕಟೇಶ್ ಹಾಗೂ ಹಿರಿಯ ಪತ್ರಕರ್ತ ಗಂಗಾವತಿಯ ಕೆ. ನಿಂಗಜ್ಜ ನೇಮಕಗೊಂಡಿದ್ದಾರೆ.
ಮುಂದಿನ ಸರ್ಕಾರದ ಆದೇಶದವರೆಗೆ ಇವರುಗಳು ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಹಾಗೂ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.