Euro 2024: ಸೆಮೀಸ್‌ನಲ್ಲಿ ಡಚ್ಚರಿಗೆ ಆಘಾತ; ರೋಚಕ ಗೆಲುವಿನೊಂದಿಗೆ ಫೈನಲ್‌ ಪ್ರವೇಶಿಸಿದ ಇಂಗ್ಲೆಂಡ್…….!

ಡಾರ್ಟ್‌ಮಂಡ್‌ನ ಸಿಗ್ನಲ್ ಇಡುನಾ ಪಾರ್ಕ್‌ನಲ್ಲಿ ನಡೆದ ರೋಮಾಂಚಕ ಯುರೋ 2024 ಫುಟ್ಬಾಲ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ 2-1 ರಿಂದ ನೆದರ್‌ಲ್ಯಾಂಡ್ಸ್ ಅನ್ನು ಸೋಲಿಸಿದೆ. ಈ ಮೂಲಕ ಸತತ ಎರಡನೇ ಯುರೋಪಿಯನ್ ಚಾಂಪಿಯನ್‌ಶಿಪ್‌ಗಾಗಿ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಇಂಗ್ಲೆಂಡ್‌ ಭದ್ರಪಡಿಸಿಕೊಂಡಿದೆ. ಇಡೀ ಪಂದ್ಯ ಬಹಳ ರೋಮಾಂಚಕಾರಿಯಾಗಿತ್ತು.

ಆರಂಭದಲ್ಲಿ ನೆದರ್ಲ್ಯಾಂಡ್ಸ್‌ ಮುನ್ನಡೆ ಸಾಧಿಸಿತ್ತು. ವಿವಾದಾತ್ಮಕ VAR ನಿರ್ಧಾರ ಕೂಡ ಪಂದ್ಯದಲ್ಲಿ ಸದ್ದು ಮಾಡಿದೆ. ಬದಲಿ ಆಟಗಾರ ಓಲಿ ವಾಟ್ಕಿನ್ಸ್‌ರ ಕೊನೆಯ ನಿಮಿಷದ ಗೋಲ್‌ ಇಂಗ್ಲೆಂಡ್‌ಗೆ ಗೆಲುವು ತಂದುಕೊಟ್ಟಿದೆ. ಭಾನುವಾರ ಇಂಗ್ಲೆಂಡ್ ಮತ್ತು ಸ್ಪೇನ್ ನಡುವೆ ಅಂತಿಮ ಹಣಾಹಣಿ ನಡೆಯಲಿದೆ.

ಸೆಮಿಫೈನಲ್‌ ಪಂದ್ಯದ ಆರಂಭದಲ್ಲೇ ಇಂಗ್ಲೆಂಡ್‌ಗೆ ಆಘಾತ ಎದುರಾಗಿತ್ತು. ಕ್ಸೇವಿ ಸೈಮನ್ಸ್, ಡೆಕ್ಲಾನ್ ರೈಸ್ ಮಾಡಿದ ತಪ್ಪಿನ ಲಾಭ ಪಡೆದರು ಏಳನೇ ನಿಮಿಷದಲ್ಲಿ ನೆದರ್ಲೆಂಡ್ಸ್‌ಗೆ ಆರಂಭಿಕ ಮುನ್ನಡೆ ನೀಡಿದರು. ಆದರೆ ಇಂಗ್ಲೆಂಡ್‌ ಕೂಡ ಪೈಪೋಟಿಯಲ್ಲಿ ಹಿಂದೆ ಬೀಳಲಿಲ್ಲ.

VAR ವಿಮರ್ಶೆಯು ಇಂಗ್ಲೆಂಡ್ ಪರವಾಗಿ ವಿವಾದಾತ್ಮಕ ಪೆನಾಲ್ಟಿ ನಿರ್ಧಾರಕ್ಕೆ ಕಾರಣವಾಯ್ತು. ಈ ವೇಳೆ ಕೇನ್ ಅತ್ಯುತ್ತಮ ಗೋಲ್‌ ಮೂಲಕ ಸ್ಕೋರ್ ಅನ್ನು ಸಮಗೊಳಿಸಿದರು. ದ್ವಿತೀಯಾರ್ಧದಲ್ಲಿ ಡಚ್ ಮಿಡ್‌ಫೀಲ್ಡ್‌ಗೆ ರೊನಾಲ್ಡ್ ಕೋಮನ್ ಅವರ ಆಟ ಇಂಗ್ಲೆಂಡ್‌ನ ಆಕ್ರಮಣಕಾರಿ ಪ್ರಯತ್ನಗಳನ್ನು ನಿಗ್ರಹಿಸಿತ್ತು.

ಘರ್ಷಣೆಯ 90ನೇ ನಿಮಿಷದಲ್ಲಿ ಮತ್ತೊಂದು ಅದ್ಭುತ ಗೋಲ್‌ ಮೂಲಕ ಇಂಗ್ಲೆಂಡ್‌ ಮುನ್ನಡೆ ಸಾಧಿಸಿತು. ಈ ಗೋಲು ಇಂಗ್ಲೆಂಡ್ ಅಭಿಮಾನಿಗಳನ್ನು ಭಾವೋದ್ವೇಗಕ್ಕೆ ಒಳಪಡಿಸಿತು. ಫೈನಲ್‌ನಲ್ಲಿ ಇಂಗ್ಲೆಂಡ್‌ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು.

ಭಾನುವಾರ ಬರ್ಲಿನ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಲು ಇಂಗ್ಲೆಂಡ್ ತಯಾರಿ ನಡೆಸುತ್ತಿದೆ. ನಿರ್ಣಾಯಕ ಪಂದ್ಯಕ್ಕೆ ಕಾರ್ಯತಂತ್ರ ಹೆಣೆಯಲಾರಂಭಿಸಿದೆ. ಈ ಮೂಲಕ ಚೊಚ್ಚಲ ಯುರೋಪಿಯನ್ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಳ್ಳುವ ಕನಸು ಕಾಣುತ್ತಿದೆ.‌

https://twitter.com/EURO2024/status/1811142891282264542?ref_src=twsrc%5Etfw%7Ctwcamp%5Etweetembed%7Ctwterm%5E1811142891282264542%7Ctwgr%5Eee3a36937109e014a6022ab1b28b3066688892fc%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fenglandstormintoeuro2024finalafterwatkinslastgaspwinnersinksnetherlandsgearuptofacespain-newsid-n621533164

https://twitter.com/EURO2024/status/1811142388284543222?ref_src=twsrc%5Etfw%7Ctwcamp%5Etweetembed%7Ctwterm%5E1811142388284543222%7Ctwgr%5Eee3a36937109e014a6022ab1b28b3066688892fc%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fenglandstormintoeuro2024finalafterwatkinslastgaspwinnersinksnetherlandsgearuptofacespain-newsid-n621533164

https://twitter.com/EURO2024/status/1811117105548513351?ref_src=twsrc%5Etfw%7Ctwcamp%5Etweetembed%7Ctwterm%5E1811117105548513351%7Ctwgr%5Eee3a36937109e014a6022ab1b28b3066688892fc%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fenglandstormintoeuro2024finalafterwatkinslastgaspwinnersinksnetherlandsgearuptofacespain-newsid-n621533164

https://twitter.com/EURO2024/status/1811119447085859310?ref_src=twsrc%5Etfw%7Ctwcamp%5Etweetembed%7Ctwterm%5E1811119447085859310%7Ctwgr%5Eee3a36937109e014a6022ab1b28b3066688892fc%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fenglandstormintoeuro2024finalafterwatkinslastgaspwinnersinksnetherlandsgearuptofacespain-newsid-n621533164

https://twitter.com/EURO2024/status/1811141920317378625?ref_src=twsrc%5Etfw%7Ctwcamp%5Etweetembed%7Ctwterm%5E1811141920317378625%7Ctwgr%5Eee3a36937109e014a6022ab1b28b3066688892fc%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fenglandstormintoeuro2024finalafterwatkinslastgaspwinnersinksnetherlandsgearuptofacespain-newsid-n621533164

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read