ಬಿಸಿಲ ಝಳಕ್ಕೆ ತಂಪೆರೆಯುವ ʼಆಹಾರʼಗಳಿವು

ಬೇಸಿಗೆ ಬಿಸಿಲ ಬೇಗೆ ಶುರುವಾಗಿದೆ, ಬಿಸಿಲ ಝಳಕ್ಕೆ ಬಾಯಾರಿಕೆ ಮಾಮೂಲಿ. ದೇಹ ತಂಪಾಗಲಿ ಎನ್ನುವ ಕಾರಣಕ್ಕೆ ಕಂಡ ಕಂಡ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡೋದು ಒಳ್ಳೆಯದಲ್ಲ. ಆರೋಗ್ಯಕರ ಹಾಗೂ ಬಾಯಾರಿಕೆ ನೀಗಿಸಿ ಹಿತವೆನಿಸುವ ಪಾನೀಯ ಹಾಗೂ ಆಹಾರ ಸೇವನೆ ಮಾಡಬೇಕು.

ಬೇಸಿಗೆ ಕಾಲದಲ್ಲಿ ಮೊಸರು ನಿಮ್ಮ ಆಹಾರದ ಪಟ್ಟಿಯಲ್ಲಿರಲಿ. ಮಜ್ಜಿಗೆ ಸೇವನೆ ಮಾಡುವುದರಿಂದ ಆರೋಗ್ಯ ಸುಧಾರಿಸುವ ಜೊತೆಗೆ ಬಾಯಾರಿಕೆ ಕಡಿಮೆಯಾಗುತ್ತದೆ. ಲಸ್ಸಿ ಅಥವಾ ರೈತಾ ಮಾಡಿ ಮೊಸರನ್ನು ಸೇವನೆ ಮಾಡಬಹುದು. ಮೊಸರಿಗೆ ಹಣ್ಣುಗಳನ್ನು ಸೇರಿಸಿ ಅಥವಾ ಸ್ವಲ್ಪ ಸಕ್ಕರೆ ಸೇರಿಸಿ ಸೇವನೆ ಮಾಡಿದ್ರೆ ಮೊಸರಿನ ರುಚಿ ಹೆಚ್ಚುತ್ತದೆ.

ದುಬಾರಿಯಲ್ಲದ ಎಲ್ಲ ಕಡೆ ಸಿಗುವ ದೇಸಿ ಕೋಲ್ಡ್ ಡ್ರಿಂಕ್ಸ್ ಎಳನೀರು. ಬೇಸಿಗೆಯಲ್ಲಿ ಪ್ರತಿದಿನ ಇದ್ರ ಸೇವನೆ ಮಾಡುವುದರಿಂದ ಸಾಕಷ್ಟು ಲಾಭಗಳಿವೆ. ಕಾನ್ಸರ್ ಗುಣಪಡಿಸುವ ಶಕ್ತಿ ಇದ್ರಲ್ಲಿದ್ದು, ಬೆಳಿಗ್ಗೆ 11 ಗಂಟೆಯೊಳಗೆ ಇದನ್ನು ಸೇವನೆ ಮಾಡಿದ್ರೆ ಲಾಭ ಹೆಚ್ಚು.

ನಿಮ್ಮನ್ನು ಕೂಲಾಗಿಡುವ ಹಣ್ಣುಗಳ ಪಟ್ಟಿಯಲ್ಲಿ ಕಲ್ಲಂಗಡಿ ಮುಂದಿದೆ. ರಸ್ತೆ ಬದಿಯಲ್ಲಿ ಕತ್ತರಿಸಿಟ್ಟ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡಬೇಡಿ. ಹಣ್ಣನ್ನು ಮನೆಗೆ ತಂದು ಸ್ವಲ್ಪ ಕೂಲ್ ಆದ ಮೇಲೆ ಕತ್ತರಿಸಿ ಸೇವನೆ ಮಾಡಿ. ಜ್ಯೂಸ್ ಮಾಡಿ ಕುಡಿಯುವುದರಿಂದಲೂ ಸಾಕಷ್ಟು ಪ್ರಯೋಜನಗಳಿವೆ.

ಮಲಬದ್ಧತೆಯನ್ನು ಹೋಗಲಾಡಿಸುವ ಸೌತೆಕಾಯಿ ಬೇಸಿಗೆಗೆ ಬೆಸ್ಟ್. ಫೈಬರ್ ಅಂಶ ಸೌತೆಕಾಯಿಯಲ್ಲಿದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ.

ಹಸಿರು ತರಕಾರಿಗಳ ಸೇವನೆಯನ್ನು ಜಾಸ್ತಿ ಮಾಡಿ. ತುಂಬಾ ಬೇಯಿಸಿದ ತರಕಾರಿ ಸೇವನೆ ಬೇಡ. ಇದ್ರಿಂದ ತರಕಾರಿಯಲ್ಲಿರುವ ನೀರಿನ ಅಂಶ ಆರಿ ಹೋಗುತ್ತದೆ.

ತಂಪು ನೀಡುವ ಅದ್ಭುತ ಶಕ್ತಿ ಈರುಳ್ಳಿಯಲ್ಲಿದೆ. ಸಲಾಡ್, ಪಲ್ಯ, ಚಟ್ನಿ ರೈತಾಗಳಿಗೆ ಈರುಳ್ಳಿ ಬೆರೆಸಿ ಸೇವನೆ ಮಾಡಿ. ಕೆಂಪು ಈರುಳ್ಳಿ ಬಹಳ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read