ಆಹಾರ ಮೇಳದಲ್ಲಿ ಮಾಂಸಾಹಾರಕ್ಕೆ ಅವಕಾಶ ನಿರಾಕರಣೆ; ಉಪನ್ಯಾಸಕರ ಜೊತೆ ವಿದ್ಯಾರ್ಥಿನಿ ವಾಗ್ವಾದ

ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯಕ್ಕೆ ಪ್ರಾಶಸ್ತ್ಯ; ಬೊಂಬು ಬಿರಿಯಾನಿ, ಸೊಪ್ಪಿನ ಪಲ್ಯ ಸ್ಪೆಷಲ್ | Dasara Aahara Mela-2022 from Sept. 26 to Oct. 3 : Millet, bamboo Biryani Special - Kannada Oneindia

ಕಾಲೇಜು ವತಿಯಿಂದ ಏರ್ಪಡಿಸಲಾಗಿದ್ದ ಆಹಾರ ಮೇಳದಲ್ಲಿ ಭಾಗವಹಿಸಲು ಮಾಂಸಾಹಾರ ಸಿದ್ಧಪಡಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಲು ನಿರಾಕರಿಸಿದ ವೇಳೆ ಉಪನ್ಯಾಸಕರ ಜೊತೆ ವಾಗ್ವಾದ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದಿದೆ.

ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಆಹಾರ ಮೇಳದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ವಿದ್ಯಾರ್ಥಿನಿಯರು ಮಲೆನಾಡಿನ ಸಾಂಪ್ರದಾಯಿಕ ಮಾಂಸಹಾರವಾದ ಕೋಳಿ ಕಜ್ಜಾಯ, ರೊಟ್ಟಿ ಸೇರಿದಂತೆ ಹಲವು ತಿನಿಸುಗಳನ್ನು ತಂದಿದ್ದರು.

ಆದರೆ ಕೆಲ ಉಪನ್ಯಾಸಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಆಹಾರ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರ ನಡುವೆ ವಾಗ್ವಾದ ನಡೆದಿದ್ದು, ಅಂತಿಮವಾಗಿ ಮಾಂಸಾಹಾರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read