ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳನ್ನು 5 ಕಿ.ಮೀ ಒಳಗೆ ಉಚಿತ ಸರಬರಾಜು ಮಾಡಲು ಆಹಾರ ಇಲಾಖೆ ಸೂಚನೆ ನೀಡಿದೆ.
ಜಿಲ್ಲೆಯಲ್ಲಿನ ಎಲ್ಲಾ ಅನಿಲ ವಿತರಕರು, ಗೃಹ ಬಳಕೆಯ ಭರ್ತಿ ಮಾಡಿದ ಅನಿಲ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಸಾಗಾಣಿಕೆ ಮಾಡುವಾಗ 5 ಕಿ.ಮೀ ಒಳಗೆ ಉಚಿತವಾಗಿ ಸರಬರಾಜು ಮಾಡಬೇಕು ಎಂದು ಬಳ್ಳಾರಿ ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆಗಳ ಉಪನಿರ್ದೇಶಕ ಸಕೀನಾ ಅವರು ತಿಳಿಸಿದ್ದಾರೆ.
5 ಕಿ.ಮೀ ನಂತರದ ಪ್ರತಿ ಕಿ.ಮೀ ರೌಂಡ್ ಟ್ರಿಪ್ ಗೆ ಪ್ರತಿ ಸಿಲಿಂಡರ್‌ಗೆ 1.60 ರೂ.ತೆಗೆದುಕೊಳ್ಳಬೇಕು. ತಪ್ಪಿದ್ದಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ(ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ಆದೇಶ 2000 ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.