ಪಡಿತರ ಚೀಟಿ ಹೊಂದಿದವರಿಗೆ ಆಹಾರ ಇಲಾಖೆ ಗುಡ್ ನ್ಯೂಸ್: ಆ. 10ರವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ

ಬೆಂಗಳೂರು: ಪಡಿತರ ಚೀಟಿ ಹೊಂದಿದವರು ಅದರಲ್ಲಿನ ತಿದ್ದುಪಡಿ ಮಾಡಿಕೊಳ್ಳುವ ಸಂಬಂಧ ಆಗಸ್ಟ್ 10ರವರೆಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆ ಅವಕಾಶ ಕಲ್ಪಿಸಿದೆ.

ಪಡಿತರ ಕಾರ್ಡ್ ದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಅರ್ಜಿದಾರರು ಆಧಾರ್ ಕಾರ್ಡ್ ಪ್ರತಿ, ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಹಾಲಿ ಪಡಿತರ ಚೀಟಿ ಇಟ್ಟುಕೊಂಡಿರಬೇಕು.

ತಿದ್ದುಪಡಿ ಮಾಡಿಕೊಳ್ಳುವವರು ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಅಗತ್ಯ ದಾಖಲೆಯೊಂದಿಗೆ ತೆರಳಿ ಆನ್ಲೈನ್ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು. ಇದಕ್ಕಾಗಿ ಆಗಸ್ಟ್ 10ರವರೆಗೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read