ಹೀಗಿವೆ CM ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ʻರಾಜ್ಯ ಸಚಿವ ಸಂಪುಟ ಸಭೆʼಯ ಪ್ರಮುಖ ನಿರ್ಣಯಗಳು

ಬೆಂಗಳೂರು : ರಾಜ್ಯ ಸರ್ಕಾರವು ಗೃಹ ಜ್ಯೋತಿ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ್ದು, ಗೃಹಜ್ಯೋತಿ ಅಡಿಯಲ್ಲಿ 48 ಯೂನಿಟ್‌ ಗಿಂತ ಕಡಿಮೆ ವಿದ್ಯುತ್‌ ಬಳಕೆದಾರರ ಅರ್ಹತಾ ಬಳಕೆ ಪ್ರಮಾಣವನ್ನು ಶೇ. 10 ರ ಬದಲಿಗೆ 10 ಯುನಿಟ್‌ ಗೆ ಬದಲಾವಣೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಕೆಲವು ಪ್ರಮುಖ ನಿರ್ಣಯಗಳು ಹೀಗಿವೆ.

ಗೃಹ ಜ್ಯೋತಿ ಯೋಜನೆಯಡಿ, 48 ಯೂನಿಟ್‌ ಗಳಿಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಹೆಚ್ಚುವರಿ 10% ಬದಲಿಗೆ ಹೆಚ್ಚುವರಿ 10 ಅರ್ಹತಾ ಯೂನಿಟ್‌ಗಳನ್ನು ಒದಗಿಸಲು ನಿರ್ಧಾರ.

ಉನ್ನತ ಶಿಕ್ಷಣ ಇಲಾಖೆಯ ರಾಜ್ಯ ನಿರ್ವಹಣಾ ಘಟಕದಲ್ಲಿ 2 ವರ್ಷಗಳ ಅವಧಿಗೆ ಸಹಾಯವಾಣಿ ಆರಂಭಿಸಿ, ನಿರ್ವಹಿಸಲು ಒಟ್ಟು 18.13 ಕೋಟಿ ರೂ. ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಅಧಿಕೃತ ಷೇರು ಬಂಡವಾಳವನ್ನು ರೂ.600 ಕೋಟಿಗಳಿಂದ ರೂ.1200ಕೋಟಿಗಳಿಗೆ ಹೆಚ್ಚಿಸಲು ಅನುಮೋದನೆ.

“Digital India Land Records” ಯೋಜನೆಯಡಿ ಕಂಪ್ಯೂಟರ್‌ಗಳು, ಸ್ಕ್ಯಾನ‌ರ್, ಪ್ರಿಂಟ‌ರ್ ಸೇರಿದಂತೆ ಒಟ್ಟು 3455 ವಸ್ತುಗಳ ಖರೀದಿಗೆ ರೂ.31 ಕೋಟಿಗಳ ವೆಚ್ಚಕ್ಕೆ ಅನುಮೋದನೆ.

ರೂ.101.73 ಕೋಟಿಗಳ ವೆಚ್ಚದಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲ್ಲೂಕಿನ ಅಂತರಸಂತೆ ಮತ್ತು ಇತರೆ 134 ಜನವಸತಿಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ.

ಒಟ್ಟು ರೂ.65.07 ಕೋಟಿಗಳ ವೆಚ್ಚದಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಮತ್ತು ಇತರೆ 48 ಜನವಸತಿ ಸ್ಥಳಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

ಒಟ್ಟು ರೂ.34 ಕೋಟಿಗಳ ವೆಚ್ಚದಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ದೊಡ್ಡಬಾಗಿಲು ಮತ್ತು ಇತರೆ 24 ಜನವಸತಿ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

ರೂ.18.00 ಕೋಟಿ ಅಂದಾಜು ಮೊತ್ತದಲ್ಲಿ ಹಾವೇರಿ ತಾಲ್ಲೂಕಿನ ನೆಗಳೂರು ಹಾಗೂ ಇತರೆ 3 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪುನಶ್ಚತನ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ.

ರೂ.245.00 ಕೋಟಿಗಳ ಅಂದಾಜು ಮೊತ್ತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಉಳ್ಳಾಲ ತಾಲ್ಲೂಕಿನ 24 ಗ್ರಾಮಗಳಿಗೆ ಕೈರಂಗಳದ ನೀರು ಶುದ್ದೀಕರಣ ಘಟಕದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ “ನಂದಿಹಾಳ ಪಿ.ಹೆಚ್ ಗ್ರಾಮದ ಹೆಸರನ್ನು “ಆರೂಢ ನಂದಿಹಾಳ” ಎಂದು ಮರುನಾಮಕರಣ ಮಾಡಲು ತೀರ್ಮಾನ

ಚಿಕ್ಕಮಗಳೂರಿನ ಇನಾಂ ದತ್ತ ಪೀಠದ ಶ್ರೀ ಗುರುದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದಕ್ಕೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿರುವ ದಾವೆಗೆ ಆಕ್ಷೇಪಣೆಗಳನ್ನು ಶಿಫಾರಸ್ಸು ಮಾಡಲು ಗೃಹಮಂತ್ರಿಗಳ ನೇತೃತ್ವದಲ್ಲಿ ಸಚಿವ ಸಂಪುಟದ ಉಪಸಮಿತಿ ರಚನೆಗೆ ನಿರ್ಧಾರ.

ಯುವನಿಧಿ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಂತೆ ಶಿವಮೊಗ್ಗ ನಗರದ ಹಳೆ ಜೈಲು ಆವರಣದಲ್ಲಿ ಸಾರ್ವಜನಿಕ ಉದ್ದೇಶಕ್ಕೆಂದು ಕಾಯ್ದಿರಿಸಲಾಗಿದ್ದ ಒಟ್ಟು 46.32 ಎಕರೆ ಪ್ರದೇಶವನ್ನು “ಅಲ್ಲಮ ಪ್ರಭು ಉದ್ಯಾನವನ” ಎಂದು ನಾಮಕರಣ ಮಾಡಲು ತೀರ್ಮಾನ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕನ್ನು ”ಚನ್ನಮ್ಮನ ಕಿತ್ತೂರು ತಾಲ್ಲೂಕು” ಎಂದು ಮರುನಾಮಕರಣ ಮಾಡಲು ಒಪ್ಪಿಗೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read