ಓಟ್ಸ್ ಗೆ ಹುಳು ಹಿಡಿಯುವುದನ್ನು ತಡೆಯಲು ಅನುಸರಿಸಿ ಈ ವಿಧಾನ

ಸಾಮಾನ್ಯವಾಗಿ ಧಾನ್ಯಗಳಿಗೆ ತೇವಾಂಶ ಬಂದಾಗ ಅದಕ್ಕೆ ಕೀಟ ಬರುತ್ತದೆ. ಇದರಿಂದ ಧಾನ್ಯಗಳು ಹಾಳಾಗುತ್ತದೆ. ಇದರಿಂದ ಅವುಗಳನ್ನು ದೀರ್ಘಕಾಲದವರೆಗೆ ಇಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಓಟ್ಸ್ ಅನ್ನು ಹಲವು ದಿನಗಳ ಕಾಲ ಸಂಗ್ರಹಿಸಿ ಇಡಲು ಈ ಸಲಹೆಗಳನ್ನು ಪಾಲಿಸಿ.

ಓಟ್ಸ್ ಅನ್ನು ಪ್ಯಾಕೇಟ್ ನಲ್ಲಿ ಇರಿಸುವ ಬದಲು ಅವುಗಳನ್ನು ಗಾಳಿಯಾಡದ ಕಂಟೇನರ್ ನಲ್ಲಿ ಇರಿಸಿ. ಮತ್ತು ಅದನ್ನು ಬಿಸಿಲಿನಲ್ಲಿ ಒಣಗಿಸಿ ಇಟ್ಟರೆ ಉತ್ತಮ.

ಓಟ್ಸ್ ನಲ್ಲಿ ಇರುವೆಗಳು, ಕೀಟಗಳು ಬರದಂತೆ ತಡೆಯಲು 5 ಕರಿಬೇವಿನ ಎಲೆಗಳನ್ನು ಹಾಕಿಡಿ. ಇದರಿಂದ ಕೀಟಗಳು ಇರುವುದಿಲ್ಲ.

ಓಟ್ಸ್ ಮೀಲ್ ಅನ್ನು ಸಂಗ್ರಹಿಸಲು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಓಟ್ಸ್ ಅನ್ನು ಮಿಶ್ರಣ ಮಾಡಿ 10 ನಿಮಿಷಗಳ ಕಾಲ ಹುರಿಯಿರಿ. ಬಳಿಕ ಅದಕ್ಕೆ ಅರಿಶಿನವನ್ನು ಮಿಕ್ಸ್ ಮಾಡಿ ಅರ್ಧ ಗಂಟೆಯವರೆಗೆ ಹುರಿದು ತಣ್ಣಗಾಗಿಸಿ ಗಾಳಿಯಾಡದ ಡಬ್ಬದಲ್ಲಿ ಇರಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read