ಫ್ರೆಶರ್ ಕುಕ್ಕರ್ ನ ರಬ್ಬರ್ ಬೇಗನೆ ಹಾಳಾಗುವುದನ್ನು ತಪ್ಪಿಸಿ ದೀರ್ಘಕಾಲದವರೆಗೆ ಬಾಳಿಕೆ ಬರಲು ಅನುಸರಿಸಿ ಈ ಮಾರ್ಗ

ಫ್ರೆಶರ್ ಕುಕ್ಕರ್ ಅಡುಗೆಗೆ ಬೇಕಾಗುವಂತಹ ಮುಖ್ಯವಾದ ವಸ್ತುವಾಗಿದೆ. ಇದರಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ. ಮತ್ತು ಆಹಾರದ ರುಚಿ ಹೆಚ್ಚಿಸುತ್ತದೆ. ಹಾಗಾಗಿ ಇದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಇದರಲ್ಲಿ ಮುಖ್ಯವಾಗಿ ಬೇಕಾಗುವುದು ರಬ್ಬರ್. ಈ ರಬ್ಬರ್ ತ್ವರಿತವಾಗಿ ಹಾಳಾಗುವುದನ್ನು ತಪ್ಪಿಸಲು ಈ ಮಾರ್ಗಗಳನ್ನು ಅನುಸರಿಸಿ.

-ಪ್ರತಿಬಾರಿ ಅಡುಗೆ ಮಾಡಿದಾಗ ಕೆಲವರು ಕುಕ್ಕರ್ ರಬ್ಬರನ್ನು ತೊಳೆಯದೆ ಹಾಗೇ ಇಡುತ್ತಾರೆ. ಇದು ರಬ್ಬರ್ ಹಾಳಾಗಲು ಮುಖ್ಯ ಕಾರಣವಾಗಿದೆ. ಹಾಗಾಗಿ ಅಡುಗೆಯ ಬಳಿಕ ರಬ್ಬರನ್ನು ಚೆನ್ನಾಗಿ ತೊಳೆದು ಇಡಿ. ಇದರಿಂದ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ.

-ಕೆಲವೊಮ್ಮೆ ಅವಸರದಲ್ಲಿ ಕುಕ್ಕರ್ ಮುಚ್ಚಳದ ಜೊತೆಗೆ ರಬ್ಬರ್ ಇಡುತ್ತೇವೆ. ಮತ್ತು ಮುಚ್ಚಳವನ್ನು ತಲೆಕೆಳಗಾಗಿ ಇಡುತ್ತೇವೆ. ಇದರಿಂದ ರಬ್ಬರ್ ಮೇಲೆ ಒತ್ತಡ ಹೆಚ್ಚಾಗಿ ಅದು ಬೇಗನೆ ಹಾಳಾಗುತ್ತದೆ.

-ಅಡುಗೆ ಸೋಡಾ ರಬ್ಬರ್ ಅನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಿದೆ. ಇದನ್ನು ಬಳಸಿ ರಬ್ಬರ್ ನ ವಾಸನೆಯನ್ನು ಹೋಗಲಾಡಿಸಬಹುದು. ಮತ್ತು ರಬ್ಬರನ್ನು ಬಳಸದೆ ಹಾಗೇ ಇಡುವಾಗ ಅಡುಗೆ ಸೋಡಾದೊಂದಿಗೆ ಇಟ್ಟರೆ ಅದರ ತೇವಾಂಶ ಹಾಗೇ ಇರುತ್ತದೆ.

-ರಬ್ಬರ್  ವಾಶ್ ಮಾಡಲು ಡಿಶ್ ವಾಶ್ ಬಳಸಬೇಡಿ. ಇದರಿಂದ ರಬ್ಬರ್ ಸಡಿಲಗೊಂಡು ಬೇಗನೆ ಹಾಳಾಗುತ್ತದೆ. ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಹಾಗೇ ಕುಕ್ಕರ್ ರಬ್ಬರ್ ಅನ್ನು ಸ್ವಚ್ಛಗೊಳಿಸಲು ಸೋಪ್ ಮತ್ತು ನೀರಿನಿಂದ ತೊಳೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read