ಮಹಿಳೆಯರು ಒತ್ತಡ ನಿಭಾಯಿಸಿಕೊಳ್ಳಲು ಈ ವಿಧಾನ ಅನುಸರಿಸಿ

ಮನೆ, ಅಫೀಸ್, ಮಕ್ಕಳು ಹೀಗೆ ಎಲ್ಲಾ ಕಡೆ ಕೆಲಸ ನಿಭಾಯಿಸುವುದರಿಂದ ಸಹಜವಾಗಿಯೇ ಮಹಿಳೆಯರು ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದ ಅವರ ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಜತೆಗೆ ಕಿರಿಕಿರಿ, ಸಿಟ್ಟು, ದೈಹಿಕ ಆರೋಗ್ಯದಲ್ಲಿ ಕೂಡ ಏರುಪೇರು ಉಂಟಾಗುತ್ತದೆ. ಇದನ್ನು ನಿಭಾಯಿಸಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.

ಎಷ್ಟೇ ಒತ್ತಡವಿದ್ದರೂ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಜಾಣತನವಿಲ್ಲದೇ ಹೋದರೆ ಮತ್ತಷ್ಟೂ ತೊಂದರೆಗೆ ಸಿಲುಕಿಕೊಳ್ಳುತ್ತಿರಿ. ಹಾಗಾಗಿ ಆದಷ್ಟು ಒತ್ತಡಗಳನ್ನು ನಿಭಾಯಿಸಲು ನಿಮ್ಮದೇ ಆದ ಸುಲಭವಾದ ದಾರಿ ಹುಡುಕಿಕೊಳ್ಳಿ.

ಇದರ ಜತೆಗೆ ನಿಮ್ಮ ಕೆಲಸದ ಕುರಿತು ಒಂದು ವೇಳಾಪಟ್ಟಿ ಮಾಡಿಕೊಳ್ಳಿ. ಇದರಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂಬುದನ್ನು ಮೊದಲು ಮನದಟ್ಟು ಮಾಡಿಕೊಳ್ಳಿ.

ಇನ್ನು ಮನೆಯ ಕೆಲಸ ನಿಭಾಯಿಸುವಾಗ ಆದಷ್ಟು ಗಂಡ, ಮಕ್ಕಳ ಸಹಾಯ ಪಡೆದುಕೊಳ್ಳಿ. ಅವರು ಮಾಡುವ ಚಿಕ್ಕಪುಟ್ಟ ಸಹಾಯ ಕೂಡ ನಿಮ್ಮನ್ನು ಒತ್ತಡ ಮುಕ್ತರನ್ನಾಗಿಸುತ್ತದೆ.

ಇನ್ನು ಯೋಗ, ಧ್ಯಾನವನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ದಿನದಲ್ಲಿ ಹತ್ತು ನಿಮಿಷವಾದರೂ ಧ್ಯಾನಕ್ಕೆ ಸಮಯ ಮೀಸಲಿರಿಸಿ. ಇದರಿಂದ ಮನಸ್ಸು ಪ್ರಶಾಂತವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read