ಬಾಡಿಗೆ ಮನೆಯಲ್ಲೂ ನೀವು ಸುಖ – ಶಾಂತಿಯಿಂದಿರಲು ಈ ವಾಸ್ತು ಟಿಪ್ಸ್ ಫಾಲೋ ಮಾಡಿ

ನಾವು ವಾಸಿಸುವ ಮನೆ ವಾಸ್ತು ಪ್ರಕಾರವಿದ್ದರೆ ಮಾತ್ರ ನಮಗೆ ಒಳ್ಳೆಯದಾಗುತ್ತದೆ. ಆದರೆ ಹೆಚ್ಚಿನ ಜನರು ಉದ್ಯೋಗ ಮತ್ತು ಅಧ್ಯಯನಕ್ಕಾಗಿ ತಮ್ಮ ಮನೆಗಳಿಂದ ದೂರ ಹೋಗಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ಅಂತವರಿಗೆ ಮನೆಯನ್ನು ಹೆಚ್ಚು ಬದಲಾವಣೆ ಮಾಡಲು ಆಗುವುದಿಲ್ಲ. ಹಾಗಿದ್ದರೆ ಅವರು ವಾಸ್ತು ಪ್ರಕಾರ ಜೋಡಿಸುವುದರ ಮೂಲಕ ಆ ಮನೆಯಲ್ಲಿ ಸುಖ ಶಾಂತಿ ನೆಲೆಸುವಂತೆ ಮಾಡಬಹುದು.

ಮನೆಯಲ್ಲಿ ಸರಕುಗಳನ್ನು ಜೋಡಿಸುವಾಗ ವಾಸ್ತು ನಿಯಮ ಪಾಲಿಸಿ. ಒಂದರಿಂದ ಆ ಮನೆಯಿಂದ ನಿಮಗೆ ಒಳ್ಳೆಯದಾಗುತ್ತದೆ. ಮನೆಯ ಈಶಾನ್ಯ ಭಾಗವನ್ನು ಹೆಚ್ಚು ಖಾಲಿ ಇಡಬೇಕು. ಮನೆಯ ನೈರುತ್ಯ ದಿಕ್ಕಿನಲ್ಲಿ ಹಾಸಿಗೆಗಳಂತಹ ಭಾರವಾದ ವಸ್ತುಗಳನ್ನು ಇಡಬೇಕು. ಹಾಸಿಗೆಯ ತಲೆಯು ದಕ್ಷಿಣ ದಿಕ್ಕಿನಲ್ಲಿರಬೇಕು. ಅಂದರೆ ನಿದ್ದೆ ಮಾಡುವಾಗ ನಿಮ್ಮ ತಲೆ ದಕ್ಷಿಣ ದಿಕ್ಕಿನಲ್ಲಿರಬೇಕು, ನಿಮ್ಮ ಪಾದಗಳು ಉತ್ತರ ದಿಕ್ಕಿನಲ್ಲಿ ಇರಬೇಕು.

ಒಂದು ವೇಳೆ ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗಲು ಸಾಧ್ಯವಾಗದಿದ್ದರೆ ಪೂರ್ವ, ಪಶ್ಚಿಮ ದಿಕ್ಕಿನ ಕಡೆಗೆ ಮಲಗಬಹುದು. ಆದರೆ ಉತ್ತರ ದಿಕ್ಕಿಗೆ ಮಾತ್ರ ತಲೆ ಹಾಕಿ ಮಲಗಬೇಡಿ. ಒಂದು ಮಡಿಕೆ ನೀರನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿಡಿ. ದೇವರ ಪೂಜೆಗಾಗಿ ಒಂದು ಸ್ಥಳವನ್ನು ಮೀಸಲಿಡಿ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read