ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಈ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುತ್ತದೆ ಮತ್ತು ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಹಾಗಾಗಿ ಈ ಮಾಸದ ಪ್ರತಿದಿನವೂ ಬಹಳ ಶ್ರೇಷ್ಠವಾಗಿದೆ. ಅಂತಹ ಶ್ರೇಷ್ಠವಾದ ಮಾಸದಲ್ಲಿ ಕೆಲವು ವಾಸ್ತು ಸಲಹೆಗಳನ್ನು ಪಾಲಿಸುವುದರಿಂದ ನೀವು ಜೀವನದಲ್ಲಿ ಏಳಿಗೆ ಕಾಣಬಹುದು. ಹಾಗಾಗಿ ಆ ವಾಸ್ತು ಸಲಹೆಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಜೀವನದಲ್ಲಿ ಅದೃಷ್ಟ ಬರಲು ಶ್ರಾವಣ ಮಾಸದಲ್ಲಿ ನಿಮ್ಮ ಮನೆಯ ಹಾಲ್ ನ ಪೂರ್ವ ದಿಕ್ಕಿನಲ್ಲಿ ಒಂದು ಚಿಕ್ಕ ನೀರಿನ ಕಾರಂಜಿಯನ್ನು ಇಡಿ. ಕಾರಂಜಿಯಿಂದ ನೀರಿನ ಹರಿವು ಉತ್ತರದಿಂದ ಪೂರ್ವಕ್ಕೆ ಇದ್ದರೆ ಒಳ್ಳೆಯದು.
ಪೂರ್ವದಲ್ಲಿ ಶುದ್ಧ ನೀರು ಹರಿಯುವುದರಿಂದ ವ್ಯಕ್ತಿಯ ಜೀವನದಲ್ಲಿ ಅದೃಷ್ಟವನ್ನು ತರುತ್ತದೆ, ಇದು ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅವರ ಗುರಿಗಳನ್ನು ವೇಗವಾಗಿ ತಲುಪಲು ಸಹಾಯಮಾಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಹಾಗೇ ಶ್ರಾವಣ ಮಾಸದಲ್ಲಿ ಪೂರ್ವ ಭಾಗಕ್ಕೆ ಹೆಚ್ಚು ವಿಶೇಷತೆ ಇದೆ. ಏಕೆಂದರೆ ಈ ದಿಕ್ಕನ್ನು ಶಿವನು ಆಳುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಮನೆಯ ಪೂರ್ವ ದಿಕ್ಕಿನಲ್ಲಿ ಬಿಳಿ ಅಮೃತಶಿಲೆಯ ಒಂದೇ ತುಂಡಿನಿಂದ ಮಾಡಿದ ಅರ್ಧನಾರೇಶ್ವರ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸಿದರೆ ಶಿವನ ಅಪಾರ ಕೃಪೆ ನಿಮಗೆ ಸಿಗುತ್ತದೆ.
ತುಳಸಿಯನ್ನು ಪೋಷಿಸಿ
ಶ್ರಾವಣದಲ್ಲಿ ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಒಂದು ಸಣ್ಣ ತುಳಸಿ ಗಿಡವನ್ನು ನೆಟ್ಟು ಪೋಷಿಸಿ. ಇದರಿಂದ ಅವಿವಾಹಿತ ಹುಡುಗಿಯರಿಗೆ ಒಳ್ಳೆಯ ಸಂಬಂಧ ಕೂಡಿ ಬರಲು ಸಹಾಯ ಮಾಡುತ್ತದೆ ಎಂದು ಪರಿಗಣಿಸಲಾಗಿದೆ.
ಅಷ್ಟೇ ಅಲ್ಲದೇ ಶ್ರಾವಣ ಮಾಸದಲ್ಲಿ ನಿಮ್ಮ ಕೊರಳಿಗೆ ರುದ್ರಾಕ್ಷಿಯನ್ನು ಧರಿಸಿಕೊಳ್ಳಿ. ಇದು ಶಿವನ ಕಣ್ಣೀರಿನಿಂದ ಮಾಡಿದ ಮಣಿಯಾಗಿದ್ದರಿಂದ ಶ್ರಾವಣ ಮಾಸದಲ್ಲಿ ರುದ್ರಾಕ್ಷಿಯನ್ನು ಧರಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ, ಏಕೆಂದರೆ ಇದು ಜಾತಕದಲ್ಲಿರುವ ಗ್ರಹದೋಷವನ್ನು ನಿವಾರಿಸಿ ಜೀವನದಲ್ಲಿ ಯಶಸ್ಸು ಲಭಿಸುವಂತೆ ಮಾಡುತ್ತದೆ ಎನ್ನಲಾಗಿದೆ.
– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ
ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.
ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358