ಮದುಮಗಳು ಆಕರ್ಷಕವಾಗಿ ಕಾಣಿಸಲು ಫಾಲೋ ಮಾಡಿ ಈ ಟಿಪ್ಸ್

ಈಗ ಮದುವೆ ಮತ್ತಿತರ ಶುಭ ಸಮಾರಂಭಗಳು ಆರಂಭವಾಗಿವೆ. ಮದುವಣಗಿತ್ತಿಯರು ಮದುವೆ ದಿನದಂದು ಆಕರ್ಷಕವಾಗಿ ಮಿಂಚಬೇಕೆಂದಿದ್ದರೆ ಹೀಗೆ ಮಾಡಿ ನೋಡಿ.

ಮದುವೆ ಹದಿನೈದು ದಿನ ಇರುವಾಗ ಊಟ ಬಿಟ್ಟು ಡಯಟ್ ಮಾಡಿದರೆ ನೀವು ಮದುವೆ ದಿನ ಮತ್ತಷ್ಟು ವಿಕಾರವಾಗಿ, ಸುಸ್ತಾಗಿ ಕಾಣಿಸಬಹುದು. ಅದರ ಬದಲು ಎರಡು ತಿಂಗಳ ಮುಂಚೆಯೇ ಡಯಟ್ ಪ್ಲಾನ್ ಮಾಡಿ. ಸ್ಲಿಮ್ ಆಗಿ.

ಡಯಟ್ ಪ್ಲಾನ್ ನಲ್ಲಿ ತರಕಾರಿ ಮತ್ತು ವಿಟಮಿನ್ ಗಳ ಆಹಾರವನ್ನು ಸೇವಿಸಲು ಮರೆಯದಿರಿ. ಡೈರಿ ಉತ್ಪನ್ನಗಳಿಂದ ದೂರವಿರಿ. ಸಂಪೂರ್ಣ ಊಟ ಬಿಡುವ ಬದಲು ಸೇವಿಸುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿ.

ಸಿಹಿ ಉತ್ಪನ್ನಗಳಿಂದ ಸಾಧ್ಯವಾದಷ್ಟು ದೂರವಿರಿ. ರೆಡಿ ಫುಡ್ ಗಳೂ ಸೇರಿದಂತೆ ಬೇಕರಿ ತಿನಿಸಿನಲ್ಲಿ ಹೆಚ್ಚಿನ ಫ್ಯಾಟ್ ಅಂಶವಿದ್ದು ಬಹುಬೇಗ ನೀವು ದಪ್ಪವಾಗುತ್ತೀರಿ. ಮಾತ್ರವಲ್ಲ ಹಾರ್ಮೋನ್ ಗಳ ವ್ಯತ್ಯಾಸದಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣವೂ ಹೆಚ್ಚಬಹುದು.

ಫಿಜ್ಜಾ ಬರ್ಗರ್ ನಿಂದ ದೂರವಿದ್ದು ಎಳನೀರು, ಫ್ರೆಶ್ ಜ್ಯೂಸ್ ಗಳ ಮೊರೆ ಹೋಗಿ. ಸಾಕಷ್ಟು ನೀರು ಕುಡಿಯಿರಿ. ಒಣ ಹಣ್ಣುಗಳನ್ನು ತಾಜಾ ಹಣ್ಣುಗಳಲ್ಲಿ ಸೇವಿಸಿ. ತರಕಾರಿಗಳಿಗೂ ಆದ್ಯತೆ ನೀಡಿ. ಇವೆಲ್ಲಾ ನಿಮ್ಮ ಆರೋಗ್ಯವನ್ನು ಮತ್ತಷ್ಟು ಉತ್ತಮಗೊಳಿಸಿ ಮದುವೆ ದಿನ ನಿಮ್ಮ ಮುಖ ಹೊಳೆಯುವಂತೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read