ತಲೆ ತುರಿಕೆ ನಿವಾರಣೆಗೆ ಈ ‘ಟಿಪ್ಸ್’ ಫಾಲೋ ಮಾಡಿ

ಕೆಲವು ಬಾರಿ ಹೇನು ಇಲ್ಲದೆ ಇದ್ದರೂ, ನಾವು ಉಪಯೋಗಿಸುವ ಶಾಂಪೂಗಳಲ್ಲಿ ರಸಾಯನಿಕಗಳಿಂದ ಅಥವಾ ಹೊಟ್ಟಿನ ಕಾರಣದಿಂದ ತಲೆಬುಡ ಒಣಗಿದಂತಾಗಿ ತುರಿಕೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾದರೆ ಇಲ್ಲಿವೆ ಕೆಲವೊಂದಷ್ಟು ಟಿಪ್ಸ್.

* ಸ್ವಲ್ಪ ಆಲೀವ್ ಎಣ್ಣೆ ತೆಗೆದುಕೊಂಡು ಉಗುರು ಬೆಚ್ಚಗೆ ಮಾಡಿ ಬೆರಳಿನಿಂದ ಚೆನ್ನಾಗಿ ಮರ್ದನ ಮಾಡಿಕೊಳ್ಳಬೇಕು. ರಾತ್ರಿ ಇಡೀ ಹಾಗೆಯೇ ಬಿಟ್ಟು ಮಾರನೆಯ ದಿನ ಸ್ಯಾಲಿಸಿಲಿಕ್ ಆಮ್ಲದಿಂದ ತಯಾರಿಸಿದ ಮೆಡಿಕೇಟೆಡ್ ಶಾಂಪೂ ಬಳಸಿ ಸ್ನಾನ ಮಾಡಬೇಕು.

* ಚೆನ್ನಾಗಿ ಪುಡಿ ಮಾಡಿದ ಓಟ್ ಮೀಲ್ ಅನ್ನು ಒಣ ಬಟ್ಟೆಯಲ್ಲಿ ಹಾಕಬೇಕು. ಅದಕ್ಕೆ ಉಗುರು ಬೆಚ್ಚಗಿನ ನೀರನ್ನು ಹಾಕಿ ಆ ಪುಡಿಯನ್ನು ಚೆನ್ನಾಗಿ ಕಲಸಿ ಅದರಿಂದ ಬರುವ ನೀರನ್ನು ಒಂದು ಬಟ್ಟಲಲ್ಲಿ ಶೋಧಿಸಿ ಶೇಖರಿಸಿಡಬೇಕು. ನಂತರ ಆ ನೀರನ್ನು ತಲೆಗೆ ಹಚ್ಚಿಕೊಂಡರೆ ತಲೆಹೊಟ್ಟು ಬರುವುದಿಲ್ಲ ಹಾಗೂ ತಲೆಬುಡದ ಚರ್ಮ ಒಣಗದಂತೆ ಇರುತ್ತದೆ.

* ಆಪಲ್ ಸಿಡಾರ್ ವಿನೆಗರ್ ನಲ್ಲಿ ಸಹಜವಾದ ಅಸಿಟಿಕ್ ಆಮ್ಲ ವಿರುತ್ತದೆ. ಇದಕ್ಕೆ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳಿರುವುದರಿಂದ ತಲೆಯ ನವೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಸಮಪ್ರಮಾಣದ ವಿನೇಗರ್ ಮತ್ತು ನೀರನ್ನು ಬೆರೆಸಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಳ್ಳಬೇಕು. ಆದರೆ ತಲೆಯಲ್ಲಿ ಹುಣ್ಣಿದ್ದರೆ ಇದರ ಬಳಕೆ ಮಾಡದೇ ಇರುವುದು ಸೂಕ್ತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read