ಉದ್ಯಮದಲ್ಲಿ ಲಾಭ ಗಳಿಸಲು ಈ ‘ಟಿಪ್ಸ್’ ಅನುಸರಿಸಿ

ವ್ಯಾಪಾರದಲ್ಲಿ ಲಾಭ ಗಳಿಸಬೇಕಾದಲ್ಲಿ ವ್ಯಾಪಾರ ನಡೆಸುವ ಕಚೇರಿಯ ವಾಸ್ತು ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಸರಿಯಿಲ್ಲವಾದಲ್ಲಿ ಎಷ್ಟು ಪ್ರಯತ್ನಪಟ್ಟರೂ ಲಾಭ ಕೈಗೆ ಸಿಗುವುದಿಲ್ಲ.

ಧನ ವೃದ್ಧಿಯಾಗಬೇಕಾದಲ್ಲಿ ಕಚೇರಿಯ ಪ್ರತಿಯೊಂದು ಗೋಡೆ, ಬಾಗಿಲು ಸೇರಿದಂತೆ ಕಚೇರಿಯ ಎಲ್ಲ ವಸ್ತುಗಳನ್ನು ವಾಸ್ತು ಪ್ರಕಾರ ಇಡುವುದು ಬಹಳ ಮಹತ್ವ.

ವಾಸ್ತು ಶಾಸ್ತ್ರದ ಪ್ರಕಾರ ಕಚೇರಿಯ ಗೋಡೆಯ ಬಣ್ಣ ತಿಳಿಯಾಗಿರಲಿ.

ಕಚೇರಿಯ ಬಾಗಿಲು ಒಳಗಡೆಯಿಂದ ತೆರೆಯುವಂತಿರಲಿ. ಹೊರಗಡೆಯಿಂದ ತೆಗೆಯುವಂತಿದ್ದರೆ ಲಾಭ ಕಡಿಮೆಯಾಗುತ್ತದೆ. ಜೊತೆಗೆ ಸಾಲ ಕೂಡ ಹೆಚ್ಚಾಗುತ್ತದೆ.

ಅಂಗಡಿ ಅಥವಾ ಕಚೇರಿಯ ಉತ್ತರ ಅಥವಾ ಪಶ್ಚಿಮಕ್ಕೆ ಶೋಕೇಸ್ ಇರಲಿ. ಇದ್ರಿಂದ ಗ್ರಾಹಕರ  ಸಂಖ್ಯೆ ಹೆಚ್ಚಾಗುತ್ತದೆ.

ಧನವೃದ್ಧಿಗಾಗಿ ತಿಜೋರಿಯ ಮುಖವನ್ನು ಉತ್ತರ ದಿಕ್ಕಿನಲ್ಲಿಡಿ.

ವ್ಯಾಪಾರದಲ್ಲಿ ವೃದ್ಧಿಯಾಗ್ತಿಲ್ಲ. ಮಾರುಕಟ್ಟೆಯಲ್ಲಿ ನಿಮ್ಮ ಗೌರವಕ್ಕೆ ಧಕ್ಕೆಯಾಗ್ತಿದೆ ಎಂದಾದಲ್ಲಿ ಮೆಟ್ಟಿಲಿನ ದೋಷವಿದೆ ಎಂದರ್ಥ. ಸಮ ಪ್ರಮಾಣದ ಮೆಟ್ಟಿಲಿರದಂತೆ ನೋಡಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read