ಕೆಲಸ ಹೋದ್ರೂ ‘ಆರ್ಥಿಕ’ ಸಮಸ್ಯೆ ಕಾಡ್ಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ….!

ಯಾವುದೇ ಉದ್ಯೋಗ ಶಾಶ್ವತವಲ್ಲ. ಕೊರೊನಾ ನಂತ್ರ ವಿಶ್ವದ ಸ್ಥಿತಿ ಸಂಪೂರ್ಣ ಬದಲಾಗಿದೆ. ಅನೇಕ ಕಂಪನಿಗಳು ನಷ್ಟದಲ್ಲಿವೆ. ಮತ್ತೆ ಕೆಲ ಕಂಪನಿಗಳು ಬಾಗಿಲು ಮುಚ್ಚಿವೆ. ಈ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ, ಕಳೆದುಕೊಳ್ತಿದ್ದಾರೆ.

ಉದ್ಯೋಗವಿದ್ದಾಗ ಕೈನಲ್ಲಿ ಕಾಸು ಓಡಾಡುವ ಕಾರಣ ಸಮಸ್ಯೆ ಆಗೋದಿಲ್ಲ. ಅದೇ ಕೆಲಸ ಕಳೆದುಕೊಂಡಾಗ, ಉಳಿತಾಯ ಶೂನ್ಯವಿದ್ದಾಗ ಜೀವನ ನಡೆಸೋದು ಕಷ್ಟ. ಆ ಪರಿಸ್ಥಿತಿಯಲ್ಲಿ ಜನರು ಕಂಗಾಲಾಗ್ತಾರೆ. ಯಾವುದೇ ಸಮಯದಲ್ಲಿ ನಿಮ್ಮ ಉದ್ಯೊಗವೂ ಹೋಗ್ಬಹುದು. ಆ ಸಮಯದಲ್ಲಿ ನಿಮ್ಮ ಬಳಿ ಸಾಕಷ್ಟು ಹಣ ಇರಬೇಕೆಂದ್ರೆ ನೀವು ಕೆಲ ನಿಯಮ ಪಾಲನೆ ಮಾಡಿ.

  • ನಿಮ್ಮ ಆರು ತಿಂಗಳ ಸಂಬಳಕ್ಕೆ ಅನುಗುಣವಾಗಿ ತುರ್ತು ನಿಧಿಯನ್ನು ಸಿದ್ಧಪಡಿಸಿ. ಕೆಲಸ ಕಳೆದುಕೊಂಡ ಸಮಯದಲ್ಲಿ ನೀವು ಈ ಹಣವನ್ನು ಬಳಸಿಕೊಳ್ಳಬಹುದು. ತುರ್ತು ನಿಧಿ ಸಾಮಾನ್ಯ ಉಳಿತಾಯದ ಜೊತೆ ಇರಬೇಕು.
  • ಕೈನಲ್ಲಿ ಹಣವಿದೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡಬಾರದು. ಅನಗತ್ಯ ವಿಷ್ಯಕ್ಕೆ ನೀವು ಹಣ ಖರ್ಚು ಮಾಡದೆ ಹೋದಲ್ಲಿ ನಿಮ್ಮ ಸೇವಿಂಗ್‌ ಹೆಚ್ಚಾಗುತ್ತದೆ.
  • ಮ್ಯೂಚುವಲ್ ಫಂಡ್‌ ಅಥವಾ ಷೇರು ಮಾರುಕಟ್ಟೆಯಂತಹ ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಇದು ನಿಮಗೆ ತುರ್ತು ಸಮಯದಲ್ಲಿ ನೆರವಾಗುತ್ತದೆ.
  • ಆರೋಗ್ಯ ವಿಮೆ ಮಾಡಿಸಲು ಮರೆಯಬೇಡಿ. ನೀವು ಅಥವಾ ಕುಟುಂಬಸ್ಥರ ಚಿಕಿತ್ಸೆಗೆ ನಿಮ್ಮ ಉಳಿತಾಯದ ಹಣವೆಲ್ಲ ಖಾಲಿಯಾಗ್ಬಹುದು. ಅದೇ ನೀವು ಆರೋಗ್ಯ ವಿಮೆ ಮಾಡಿಸಿದ್ರೆ ನೆಮ್ಮದಿ.
  • ಸಾಲ ಮಾಡದಿರುವುದು ಒಳ್ಳೆಯದು. ಅನಿವಾರ್ಯ ಎಂದಾಗ ಒಂದು ಸಾಲ ಮುಗಿದ ಮೇಲೆ ಇನ್ನೊಂದು ತೆಗೆದುಕೊಳ್ಳಿ. ಒಂದೇ ಬಾರಿ ಎರಡು ಮೂರು ಕಡೆ ಸಾಲ ಮಾಡಿದ್ದರೆ ಇಎಂಐಗೆ ನಿಮ್ಮೆಲ್ಲ ಸಂಬಳ ಖರ್ಚಾಗುವ ಕಾರಣ ಉಳಿತಾಯ ಸಾಧ್ಯವಾಗೋದಿಲ್ಲ.
Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read