ಮನೆ ಗೋಡೆ ಸುಂದರವಾಗಿಸಲು ಅನುಸರಿಸಿ ಈ ಸರಳ ‘ಟಿಪ್ಸ್’

ಮನೆ ಸುಂದರ ಮತ್ತು ಸ್ವಚ್ಛವಾಗಿರಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ.  ಮನೆಯ ಅಲಂಕಾರಕ್ಕೆ, ಪೀಠೋಪಕರಣ, ಅಲಂಕಾರಿಕ ವಸ್ತುಗಳ ಜೊತೆ ಗೋಡೆಗಳ ಸೌಂದರ್ಯವೂ ಅಷ್ಟೇ ಮುಖ್ಯ.

ಹೆಚ್ಚಿನ ಜನರು ದುಬಾರಿ ಮೌಲ್ಯದ ವಸ್ತುಗಳನ್ನಿಟ್ಟು ತಮ್ಮ ಮನೆಗಳನ್ನು ಅಲಂಕರಿಸುತ್ತಾರೆ. ಆದರೂ ಸಹ ಮನೆಯಲ್ಲೇನೋ ಕೊರತೆ ಇದೆ ಎಂದೆನಿಸುತ್ತೆ. ಕಾರಣ ಗೋಡೆಗಳನ್ನು  ಅಲಂಕರಿಸದಿರುವುದು. ಸಿಂಪಲ್ಲಾಗಿರುವ ಗೋಡೆಗಳು ಇಡೀ ಮನೆ ನೋಟವನ್ನು ಹಾಳುಮಾಡಬಹುದು. ನೀವೂ ನಿಮ್ಮ ಮನೆಯ ನೋಟವನ್ನು ಬದಲಾಯಿಸಬೇಕೆಂದರೆ, ಈ ವಿಧಾನಗಳೊಂದಿಗೆ ಮನೆಯನ್ನು ಅಲಂಕರಿಸಿ.

ಗುಡ್ಡ- ಬೆಟ್ಟಗಳ ತ್ರೀಡಿ ಫೋಟೋವನ್ನು ಗೋಡೆಗೆ ಹಾಕುವ ಮೂಲಕ ಗೋಡೆಯ ಅಲಂಕಾರ ಹೆಚ್ಚಿಸಬಹುದು. ಇದು ಗೋಡೆಗಳಿಗೆ ವಿಭಿನ್ನ ಲುಕ್ ನೀಡುತ್ತವೆ.

ಸಾಮಾನ್ಯವಾಗಿ ಎಲ್ಲರೂ ಮನೆ ಅಲಂಕಾರಕ್ಕೆ ವರ್ಣರಂಜಿತ ವಾಲ್ ಪೇಪರ್ ಬಳಸುತ್ತಾರೆ. ಆದರೆ ಭಿನ್ನ ವಿಭಿನ್ನವಾದ ಕಲರ್ ಪ್ಯಾಟರ್ನ ಬಳಸುವ ಮೂಲಕ ಮನೆ ಡಿಫರೆಂಟ್ ಆಗಿ ಕಾಣುವಂತೆ ಮಾಡಬಹುದು.

ಸರಳವಾದ ಚಿತ್ರ ಅಥವಾ ಪೇಂಟಿಂಗ್ ನಿಂದ  ಕೋಣೆಯ ಅಂದ ಇನ್ನಷ್ಟು ಹೆಚ್ಚುತ್ತದೆ. ಮನೆಗೆ ಬಂದ  ಅಥಿತಿಗಳಿಗೆ ಕಲಾತ್ಮಕವಾದ ಗೋಡೆ ಇನ್ನಷ್ಟು ಮುದಗೊಳಿಸುತ್ತೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಗೋಡೆ ಅಲಂಕಾರಿಕ ವಸ್ತುಗಳು ಸಿಗ್ತಿವೆ. ತ್ರೀಡಿ ಫೋಟೋಗಳು ಕಡಿಮೆ ಬೆಲೆಗೆ ಲಭ್ಯವಿದೆ. ಅವುಗಳನ್ನು ತಂದು ಸರಿ ಹೊಂದುವ ಗೋಡೆಗೆ ಫೋಟೋ ಅಂಟಿಸಿದ್ರೆ ಮುಗೀತು. ಮನೆ ಸೌಂದರ್ಯ ಇಮ್ಮಡಿಗೊಳ್ಳುವುದ್ರಲ್ಲಿ ಎರಡು ಮಾತಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read