ಸುಖಕರ ʼಲೈಂಗಿಕʼ ಜೀವನ ನಿಮ್ಮದಾಗಬೇಕಾದ್ರೆ ಇವುಗಳನ್ನು ಪಾಲಿಸಿ

ಮದುವೆಯಾದ ನಾಲ್ಕೈದು ವರ್ಷಗಳ ನಂತ್ರ ದಂಪತಿ ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತ ಬರುತ್ತಾರೆ. ಸಂಸಾರ, ಮಕ್ಕಳು, ಜವಾಬ್ದಾರಿ, ಕೆಲಸದ ಒತ್ತಡ ಇದೆಲ್ಲವೂ ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಆದ್ರೆ ಆಯುರ್ವೇದದಲ್ಲಿ ಹೇಳಿದ ಕೆಲ ವಸ್ತುಗಳನ್ನು ಬಳಕೆ ಮಾಡುವುದ್ರಿಂದ ಮದುವೆಯಾಗಿ 15-20 ವರ್ಷವಾದ್ರೂ ಮೊದಲಿನ ಆಸಕ್ತಿ ಹಾಗೆಯೇ ಇರುತ್ತದೆ.

ಆಯುರ್ವೇದದ ಪ್ರಕಾರ ಮೊದಲ ರಾತ್ರಿ ಅನುಭವ ಸದಾ ಸಿಗಬೇಕೆಂದ್ರೆ ಮಸಾಲೆ ಪದಾರ್ಥಗಳ ಬಳಕೆಯಾಗಬೇಕು. ಮಸಾಲೆ ಪದಾರ್ಥಗಳು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತವೆ. ಏಲಕ್ಕಿ, ದಾಲ್ಚಿನಿ, ಲವಂಗ, ಕರಿಮೆಣಸು ಮುಂತಾದ ಮಸಾಲೆ ಪದಾರ್ಥಗಳನ್ನು ಅವಶ್ಯವಾಗಿ ಸೇವನೆ ಮಾಡಬೇಕು.

ಅರ್ಜುನ್ ಮರದ ತೊಗಟೆಯ ಬಿಳಿ ಭಾಗವನ್ನು ಪುಡಿ ಮಾಡಬೇಕು. ಅದನ್ನು ಹಾಲಿನ ಜೊತೆ ಬೆರಸಿ ಸೇವನೆ ಮಾಡಬೇಕು. ಈ ಪುಡಿ ಆಯುರ್ವೇದಿಕ ಔಷಧಿ ಅಂಗಡಿಗಳಲ್ಲಿ ಸಿಗುತ್ತದೆ.

ಅಶ್ವಗಂಧಿ, ಕೆಂಪು ಚಂದನ, ಲವಂಗ, ಸೈಂಧವ ಲವಣವನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಸೇವಿಸುತ್ತ ಬಂದಲ್ಲಿ ಒಳ್ಳೆಯದು. ಇದು ಲೈಂಗಿಕ ಉತ್ತೇಜನ ಹೆಚ್ಚಿಸುವ ಜೊತೆಗೆ ದೀರ್ಘ ಕಾಲದವರೆಗೆ ಸೆಕ್ಸ್ ಸುಖ ಪಡೆಯಲು ನೆರವಾಗುತ್ತದೆ

ಜೇನು ತುಪ್ಪಕ್ಕೆ ಕರಿ ಮೆಣಸನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದ್ರಿಂದ ಸುಖ ಲೈಂಗಿಕ ಜೀವನ ಪಡೆಯಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read