ಶೌಚಾಲಯದ ಫ್ಲಷ್‌ ಸಮಸ್ಯೆ: ಎರಡು ಗಂಟೆ ಬಳಿಕ ವಾಪಸಾದ ವಿಮಾನ

ಆಸ್ಟ್ರಿಯನ್ ಏರ್‌ಲೈನ್ಸ್ ವಿಮಾನವು ವಿಯೆನ್ನಾದಿಂದ ನ್ಯೂಯಾರ್ಕ್‌ಗೆ ಎರಡು ಗಂಟೆಗಳ ಕಾಲ ಹಾರಾಟದ ಬಳಿಕ ಹಿಂತಿರುಗಿದೆ. ಇದಕ್ಕೆ ಕಾರಣ, ಶೌಚಾಲಯದ ಸಮಸ್ಯೆ.

ಬೋಯಿಂಗ್ 777 ವಿಮಾನದಲ್ಲಿ ಸುಮಾರು 300 ಜನರು ಇದ್ದರು, ಇದು ಎಂಟು ಗಂಟೆಗಳ ಪ್ರಯಾಣ ನಡೆಸಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಶೌಚಾಲಯಗಳನ್ನು ಸರಿಯಾಗಿ ತೊಳೆಯಲು ಸಾಧ್ಯವಾಗದಿರುವುದನ್ನು ಕಂಡು ಸಿಬ್ಬಂದಿ ದೂರಿದ್ದಾರೆ. ಶೌಚಾಲಯದ ಫ್ಲಷ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ವಿಮಾನ ವಾಪಸಾಗಿದೆ. ನಂತರ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದ ಬಳಿಕ ವಿಮಾನ ಪುನಃ ಹಾರಾಟ ಮಾಡಿ ವಿಯೆನ್ನಾ ತಲುಪಿದೆ. ವಿಮಾನವನ್ನು ಈಗಾಗಲೇ ಸರಿಪಡಿಸಲಾಗಿದೆ ಮತ್ತು ಸೇವೆಗೆ ಮರಳಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read