ಫ್ಲೋರಿಡಾ: ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಒಂದು ಅಮಾನವೀಯ ಘಟನೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಜೋಸೆಫ್ ಲ್ಯೂಕ್ ಬ್ರೌನ್ ಮತ್ತು ಸ್ಟೆಫಾನಿ ಕೆ ವೇಗ್‌ಮನ್ ಎಂಬ ದಂಪತಿ ನೂರು ವರ್ಷಗಳಿಗೂ ಹಳೆಯದಾದ ಐತಿಹಾಸಿಕ ಸ್ಮಶಾನದೊಳಗೆ ನುಗ್ಗಿ ಸಮಾಧಿಯ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ವರದಿಗಳ ಪ್ರಕಾರ, ಈ ಜೋಡಿ ತಮ್ಮ ಬಿಳಿ ನಿಸ್ಸಾನ್ ಕಾರನ್ನು ಸ್ಮಶಾನದ ಹೊರಗಿನ ಗೇಟ್ ಬಳಿ ನಿಲ್ಲಿಸಿ, ಒಳಗೆ ಅಕ್ರಮವಾಗಿ ಪ್ರವೇಶಿಸಿ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಹೋಗಿದ್ದರು. ಮಾರ್ಚ್ 26 ರಂದು ಈ ಕೃತ್ಯ ನಡೆದಿದ್ದು, ಗಸ್ತು ತಿರುಗುತ್ತಿದ್ದ ಪೊಲೀಸರೊಬ್ಬರು ಕಿಟಕಿ ತೆರೆದಿದ್ದ ಅನುಮಾನಾಸ್ಪದ ಕಾರನ್ನು ಗಮನಿಸಿ ಪರಿಶೀಲಿಸಿದಾಗ ಈ ಅಸಹ್ಯ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಬ್ರೌನ್ ಮತ್ತು ವೇಗ್‌ಮನ್ ಸಮಾಧಿಯ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಪೊಲೀಸರು ಅವರನ್ನು ತಕ್ಷಣವೇ ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಕಾರನ್ನು ಪರಿಶೀಲಿಸಿದಾಗ ಮೆಥಾಂಫೆಟಮೈನ್, ಕ್ಸಾನಾಕ್ಸ್ ಮತ್ತು ಆಕ್ಸಿಕೊಡೋನ್ ಎಂಬ ಮಾದಕ ದ್ರವ್ಯಗಳು ಪತ್ತೆಯಾಗಿವೆ. ಹೀಗಾಗಿ, ಇಬ್ಬರನ್ನೂ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೂ ಬಂಧಿಸಲಾಗಿದೆ.
ವೇಗ್‌ಮನ್ ಅವರನ್ನು ಈಗಾಗಲೇ ಜೈಲಿಗೆ ಕಳುಹಿಸಲಾಗಿದ್ದು, ಗಾಯಗೊಂಡಿದ್ದ ಬ್ರೌನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಬಂಧನಕ್ಕೂ ವಾರೆಂಟ್ ಹೊರಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೇಗ್‌ಮನ್ ವಿರುದ್ಧ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾದಕ ದ್ರವ್ಯ ಹೊಂದಿದ್ದ ಎರಡು ಪ್ರಕರಣಗಳು ಮತ್ತು ಆಕ್ಸಿಕೊಡೋನ್ ಕಳ್ಳಸಾಗಣೆ ಮಾಡಿದ ಒಂದು ಪ್ರಕರಣ ದಾಖಲಾಗಿದೆ. ವಿಶೇಷವೆಂದರೆ, ಈ ಘಟನೆಗೆ ಕೆಲವೇ ವಾರಗಳ ಮೊದಲು ಆಕೆ ಡ್ರಗ್ ಪ್ಯಾರಾಫೆರ್ನಾಲಿಯಾ ಹೊಂದಿದ್ದಕ್ಕಾಗಿ ಬಂಧಿತಳಾಗಿದ್ದಳು.
ಈ ಅಮಾನವೀಯ ಕೃತ್ಯವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪವಿತ್ರ ಸ್ಥಳದ ಘನತೆಯನ್ನು ಕಾಪಾಡಬೇಕಾದವರೇ ಇಂತಹ ಕೃತ್ಯಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.