ಕೊರೋನಾ ಹೊಸ ತಳಿ ‘ಫ್ಲಿರ್ಟ್’ 91’ ಕೇಸ್ ಪತ್ತೆ: ಹೆಚ್ಚಿದ ಆತಂಕ

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಹೊಸ ತಳಿ ಫ್ಲಿರ್ಟ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 91 ಕೇಸ್ ಗಳು ಪತ್ತೆಯಾಗಿದ್ದು, ಇದು ಈ ಹಿಂದೆ ಪತ್ತೆಯಾಗಿದ್ದ ಜೆಎನ್ 1 ತಳಿಯನ್ನು ಮೀರಿಸುವ ಆತಂಕಕ್ಕೆ ಕಾರಣವಾಗಿದೆ.

ಅಮೆರಿಕ, ಆಸ್ಟ್ರೇಲಿಯಾ ದೇಶಗಳಲ್ಲಿ ಕೊರೋನಾ ಹೊಸ ಅಲೆಗೆ ಕಾರಣವಾಗಿರುವ ಒಮಿಕ್ರಾನ್ ಕೊರೋನಾ ವೈರಸ್ ನ ಹೊಸ ಉಪ ತಳಿ ಮಹಾರಾಷ್ಟ್ರದಲ್ಲೂ ಪತ್ತೆಯಾಗಿದೆ. ಫ್ಲಿರ್ಟ್ ಎಂದು ಹೆಸರಿಸಲಾಗಿರುವ ಈ ಉಪತಳಿಯ 91 ಪ್ರಕರಣಗಳು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ವರದಿಯಾಗಿದೆ.

ಪುಣೆಯಲ್ಲಿ 51, ಥಾಣೆಯಲ್ಲಿ 20 ಕೇಸ್ ಗಳು ಪತ್ತೆಯಾಗಿದ್ದು, ಅಮರಾವತಿ, ಔರಂಗಾಬಾದ್, ಸೊಲ್ಲಾಪುರ ತಲಾ 2, ಆಹಮದ್ ನಗರ, ನಾಸಿಕ್, ಲಾಥೋರ್, ಸಾಂಗ್ಲಿಯಲ್ಲಿ ತಲಾ ಒಬ್ಬರಲ್ಲಿ ಕೊರೋನಾ ಉಪ ತಳಿ ಫ್ಲಿರ್ಟ್ ಪತ್ತೆಯಾಗಿದೆ.

ಜನವರಿಯಲ್ಲಿ ಅಮೆರಿಕದಲ್ಲಿ ಒಮಿಕ್ರಾನ್ ಮೊದಲ ಪ್ರಕರಣ ದಾಖಲಾಗಿದ್ದು, ಭಾನುವಾರ ಅಮೆರಿಕದಲ್ಲಿ 1125 ಕೇಸ್ ಗಳು ವರದಿಯಾಗಿವೆ. ಚಿಲಿಯಲ್ಲಿ 1215 ಫ್ಲಿರ್ಟ್ ಕೇಸ್ ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read