‘ಬೆಲ್ ಬಾಟಂ’ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ ಐದು ವರ್ಷ

ಜಯತೀರ್ಥ ನಿರ್ದೇಶನದ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಮ್’ ಚಿತ್ರ 2019 ಫೆಬ್ರವರಿ 15 ರಂದು ರಾಜ್ಯದ್ಯಂತ ತೆರೆಕಂಡಿತ್ತು. ಈ ಸಿನಿಮಾ ನೂರು ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರ ಬಿಡುಗಡೆಯಾಗಿ ಇಂದು ಐದು ವರ್ಷ ಪೂರೈಸಿದ್ದು ನಟ ರಿಷಬ್ ಶೆಟ್ಟಿ ಈ ಸಂತಸವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ.

”ಡಿಟೆಕ್ಟಿವ್ ದಿವಾಕರನಾಗಿ ಬೆಲ್ ಬಾಟಮ್ ತೊಟ್ಟು ತೆರೆ ಮೇಲೆ ಬಂದ ಆ ದಿನಕ್ಕೆ ಇಂದು ಭರ್ತಿ 5 ವರ್ಷಗಳು ಚಿತ್ರವನ್ನು ಮೆಚ್ಚಿ ಕೊಂಡಾಡಿ ಅದನ್ನು ನನ್ನ ಸಿನಿಪಯಣದ ಮೈಲಿಗಲ್ಲಾಗಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ಜೋಡಿಯಾಗಿ ಹರಿಪ್ರಿಯಾ ಅಭಿನಯಿಸಿದ್ದು, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ, ದಿನೇಶ್ ಮಂಗಳೂರು, ಪ್ರಕಾಶ್ ತುಮ್ಮಿನಾಡ್, ರೇಣುಕಾ, ಗಿರಿಕೃಷ್ಣ, ನವೀನ್ ಡಿ ಪಡಿಲ್ ಸೇರಿದಂತೆ ಹಲವರ ತಾರಾ ಬಳಗಾವಿದೆ. ಗೋಲ್ಡ್ ಹಾರ್ಸ್ ಸಿನಿಮಾ ಬ್ಯಾನರ್ ನಲ್ಲಿ ಸಂತೋಷ್ ಕುಮಾರ್ ನಿರ್ಮಾಣ ಮಾಡಿದ್ದು, ಅಜನೀಶ್ ಲೋಕನಾಥ್  ಸಂಗೀತ ಸಂಯೋಜನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read