BREAKING : ಬೆಂಗಳೂರಿನ ಅಗ್ನಿ ಅವಘಡದಲ್ಲಿ ಐವರು ಸಜೀವ ದಹನ ಕೇಸ್ : ಇಬ್ಬರು ಕಟ್ಟಡ ಮಾಲೀಕರು ಅರೆಸ್ಟ್.!

ಬೆಂಗಳೂರು : ಬೆಂಗಳೂರಿನ ಅಗ್ನಿ ಅವಘಡದಲ್ಲಿ ಐವರು ಸಜೀವ ದಹನರಾದ ಕೇಸ್ ಗೆ ಸಂಬಂಧಿಸಿದಂತೆ ಇಬ್ಬರು ಕಟ್ಟಡ ಮಾಲೀಕರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಾಲಕೃಷ್ಣ ಶೆಟ್ಟಿ ಹಾಗೂ ಸಂದೀಪ್ ಶೆಟ್ಟಿ ಎಂದು ಗುರುತಿಸಲಾಗಿದೆ. ಮೃತನ ಸೋದರ ಗೋಪಾಲ್ ಸಿಂಗ್ ದೂರಿನ ಮೇರೆಗೆ ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಕಲ್ಪಿಸದ ಆರೋಪದ ಮೇರೆಗೆ ಇಬ್ಬರು ಕಟ್ಟಡ ಮಾಲೀಕರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಮೃತಪಟ್ಟಿದ್ದಾರೆ.ಮೃತರನ್ನು ಮದನ್ (38) ಪತ್ನಿ ಸಂಗೀತಾ (33) ಮಕ್ಕಳಾದ ಮಿತೇಶ್ (8) ವಿಹಾನ್ (5) ಎಂದು ಗುರುತಿಸಲಾಗಿದೆ. ಹಾಗೂ ಮತ್ತೊಂದು ಮಹಡಿಯಲ್ಲಿದ್ದ ಸುರೇಶ್ ಕೂಡ ಬೆಂಕಿಗೆ ಸಿಲುಕಿ ಸಜೀವ ದಹನರಾಗಿದ್ದಾರೆ. ಐವರ ಸಾವಿಗೆ ಪರೋಕ್ಷವಾಗಿ ಕಟ್ಟಡ ಮಾಲೀಕರೇ ಕಾರಣವೆಂದು ದೂರು ದಾಖಲಿಸಲಾಗಿತ್ತು,. .. ಬೆಂಗಳೂರು ನಗರದ ನಗರ್ತಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read