ಕಾರವಾರ: ಮೀನುಗಾರಿಕಾ ಬೋಟ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.
ಇಲ್ಲಿನ ಗಂಗೊಳ್ಳಿಯಲ್ಲಿ ಈ ಘಟನೆ ನಡೆದಿದೆ. ಒಡಿಶಾ ರಾಜ್ಯದ ಸಂಬಲಪುರದ ನಿರಂಜನ್ ಮೃತ ಕಾರ್ಮಿಕ. ಮೀನುಗಾರಿಕೆಗಾಗಿ ಒಡಿಶಾದಿಂದ ಗೋಕರ್ಣಕ್ಕೆ ಬಂದಿದ್ದ. ಇದೀಗ ಮೀನುಗಾರಿಕಾ ಬೋಟ್ ನಲ್ಲಿಯೇ ಶವವಾಗಿ ಪತ್ತೆಯಾಗಿದ್ದಾನೆ.
ಕಾರ್ಮಿಕನ ಮೃತದೇಹವನ್ನು ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕಾರ್ಮಿಕ ನಿರಂಜನ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.