BREAKING : ನಟ ಯಶ್ ಅಭಿಯದ ‘ರಾಮಾಯಣ’ ಚಿತ್ರದ ಫಸ್ಟ್ ಟೈಟಲ್ ಟೀಸರ್ ರಿಲೀಸ್ : ಥ್ರಿಲ್ ಆದ ಫ್ಯಾನ್ಸ್ |WATCH

ಬೆಂಗಳೂರು : ಬಹು ನಿರೀಕ್ಷಿತ  ‘ರಾಮಾಯಣ’ ಚಿತ್ರದ ಟೈಟಲ್ ಗ್ಲಿಂಪ್ಸ್ ರಿಲೀಸ್  ಆಗಿದ್ದು, ರಾವಣನ ಪಾತ್ರದಲ್ಲಿ ನಟ ಯಶ್  ಅಬ್ಬರಿಸಲು ರೆಡಿಯಾಗಿದ್ದಾರೆ.

ಹೌದು, ರಾಮಾಯಣ ಚಿತ್ರದ ಫಸ್ಟ್ ಟೈಟಲ್ ಟೀಸರ್ ಕೊನೆಗೂ ರಿಲೀಸ್ ಆಗಿದ್ದು, ಟೀಸರ್ ನೋಡಿದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ರಾಮಾಯಣ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾಗೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡುತ್ತಿದ್ದಾರೆ. ಇದು ಭಾರತದ ಬಿಗ್ ಬಜೆಟ್ ಸಿನಿಮಾ ಆಗಿದ್ದು, ಬರೋಬ್ಬರಿ 835 ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಯಶ್ ರಾವಣನಾಗಿ ಅಬ್ಬರಿಸಲಿದ್ದು, ರಾಮನಾಗಿ ರಣಬೀರ್ ಕಪೂರ್ ನಟಿಸಲಿದ್ದಾರೆ. ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಮಿಂಚಲಿದ್ದಾರೆ. ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ.

”ಹತ್ತು ವರ್ಷಗಳ ಆಕಾಂಕ್ಷೆ. ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯವನ್ನು ಜಗತ್ತಿಗೆ ತರುವ ನಿರಂತರ ದೃಢನಿಶ್ಚಯ. ರಾಮಾಯಣವನ್ನು ಅತ್ಯಂತ ಗೌರವ ಮತ್ತು ಗೌರವದಿಂದ ಪ್ರಸ್ತುತಪಡಿಸುವುದನ್ನು ಖಚಿತಪಡಿಸಿಕೊಳ್ಳಲು ವಿಶ್ವದ ಕೆಲವು ಅತ್ಯುತ್ತಮ ವ್ಯಕ್ತಿಗಳ ಸಹಯೋಗದ ಮೂಲಕ ಪಡೆದ ಫಲಿತಾಂಶ” ಎಂದು ನಟ ಯಶ್ ಟ್ವೀಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read