ಅಮರಾವತಿ: ಆಂಧ್ರಪ್ರದೇಶ ಸರ್ಕಾರ ಅನ್ನದಾತ ಸುಖೀಭವ ಯೋಜನೆಯಡಿ ರಾಜ್ಯದ ರೈತರಿಗೆ ವಾರ್ಷಿಕ 20,000 ರೂ ನೀಡಲಿದೆ.
ಮೊದಲ ಕಂತಿನ ಹಣವನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬುನಾಯ್ಡು ಶನಿವಾರ ಬಿಡುಗಡೆ ಮಾಡಿದ್ದಾರೆ. ಮೊದಲ ಕಂತಿನಲ್ಲಿ 7 ಸಾವಿರ ರೂಪಾಯಿ ಹಾಗೂ ನಂತರದ ಎರಡು ಕಂತುಗಳಲ್ಲಿ ತಲಾ 6 ಸಾವಿರ ರೂಪಾಯಿಗಳನ್ನು ರಾಜ್ಯ ಸರ್ಕಾರದಿಂದ ರೈತರಿಗೆ ನೀಡಲಾಗುವುದು.
ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಕಂತಿನ ಜೊತೆಯಲ್ಲಿ ಈ ಹಣ ನೀಡುತ್ತಿದ್ದು, ರೈತರು ವಾರ್ಷಿಕ ಒಟ್ಟು 20,000 ರೂ. ಪಡೆಯಲಿದ್ದಾರೆ.
ಶನಿವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲಿನ ಮೊತ್ತ 46.86 ಲಕ್ಷ ರೈತರ ಖಾತೆಗೆ ಜಮಾ ಮಾಡಲಾಗಿದೆ. ಒಟ್ಟು 31 75 ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು 2343 ಕೋಟಿ ರೂ.ಗಳಾಗಿದ್ದು, ಕೇಂದ್ರ ಸರ್ಕಾರ 832 ಕೋಟಿ ರೂ. ನೀಡಿದೆ ಎಂದು ಚಂದ್ರಬಾಬು ನಾಯ್ಡು ಮಾಹಿತಿ ನೀಡಿದ್ದಾರೆ.