BIG NEWS : ವಿಶ್ವದಲ್ಲೇ ಇದೇ ಮೊದಲು : ಚಿಕುನ್ ಗುನ್ಯಾಗೆ ಲಸಿಕೆ ಅನುಮೋದನೆ

ನವದೆಹಲಿ : ಜನರನ್ನು ಹಿಂಡಿ ಹಿಪ್ಪೆ ಮಾಡುವ  ಚಿಕುನ್ ಗುನ್ಯಾ  ಖಾಯಿಲೆಗೆ ಅಮೆರಿಕಾದ  ಆಸ್ತ್ರಿಯಾದ ವಾಲ್ನೇವಾ ಸಂಸ್ಥೆ ಇದೇ ಮೊದಲ ಬಾರಿಗೆ ಲಸಿಕೆ ಅನುಮೋದಿಸಿದೆ.

ಹೌದು. ಇಕ್ಸ್ ಚಿಕ್ ಎಂಬ ಈ ಲಸಿಕೆಗೆ ಅಮೆರಿಕದ ಆಹಾರ ಮತ್ತು ಔಷಧ ಸಂಸ್ಥೆ ಒಪ್ಪಿಗೆ ನೀಡಿದೆ. ಇದನ್ನು ಸ್ನಾಯುಗಳಿಗೆ ಇಂಜೆಕ್ಷನ್ ಮೂಲ ನೀಡಲಾಗುತ್ತದೆ ಎಂದು ಎಫ್ ಡಿ ಎ ನಿರ್ದೇಶಕ ಹೇಳಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಈ ಲಸಿಕೆಯನ್ನು ನೀಡಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಈ ಲಸಿಕೆ ಪಡೆದುಕೊಂಡ 266 ಮಂದಿಯಲ್ಲಿ ಪ್ರತಿಕಾಯ ಪ್ರಮಾಣ ಹೆಚ್ಚಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಸುಮಾರು 3000 ಕ್ಕೂ ಹೆಚ್ಚು ಮಂದಿಗೆ ಈ ಲಸಿಕೆಯನ್ನು ನೀಡಿ ಸುರಕ್ಷತೆ ಖಚಿತಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read