ಉತ್ತರ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೂತನ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ್ದು, ಇದೀಗ ಮೊದಲ ವಿಮಾನ ಅಯೋಧ್ಯೆಗೆ ಬಂದಿಳಿದಿದೆ.
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಇಂಡಿಗೋ ವಿಮಾನವು ಶನಿವಾರ ಸಂಜೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಆಗಮಿಸಿದ್ದು, ಅಯೋಧ್ಯೆ ತಲುಪುತ್ತಲೇ ಪ್ರಯಾಣಿಕರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಮೊದಲ ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯಿತು, ವಿಮಾನ ಇಳಿದ ಕೂಡಲೇ, ರಾಮ ಭಕ್ತರು ಅಯೋಧ್ಯೆಯ ಪವಿತ್ರ ಭೂಮಿಗೆ ನಮಸ್ಕರಿಸಿದರು. ನಂತರ ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದರು.
https://twitter.com/ANI/status/1741015860322705696?ref_src=twsrc%5Etfw%7Ctwcamp%5Etweetembed%7Ctwterm%5E1741015860322705696%7Ctwgr%5Edbf21c1f9c71cbea925f47c3ae3a468080bc4d90%7Ctwcon%5Es1_&ref_url=https%3A%2F%2Fvistaranews.com%2Fhoroscope-religion%2Freligious%2Ffirst-flight-arrives-at-ayodhya-airport-passengers-chant-jai-shri-ram%2F544339.html
https://twitter.com/ANI/status/1741047647434314119?ref_src=twsrc%5Etfw%7Ctwcamp%5Etweetembed%7Ctwterm%5E1741047647434314119%7Ctwgr%5Edbf21c1f9c71cbea925f47c3ae3a468080bc4d90%7Ctwcon%5Es1_&ref_url=https%3A%2F%2Fvistaranews.com%2Fhoroscope-religion%2Freligious%2Ffirst-flight-arrives-at-ayodhya-airport-passengers-chant-jai-shri-ram%2F544339.html