Viral Video | ಮನೆಗೆ ಬೆಂಕಿ ಬಿದ್ದಿದೆ ಎಂದು ಓಡೋಡಿ ಬಂದು ಬೇಸ್ತುಬಿದ್ದ ಅಗ್ನಿಶಾಮಕ ಸಿಬ್ಬಂದಿ

Firefighters had to rush to this house 'on fire' in New York. But actually… - India Today

ನ್ಯೂಯಾರ್ಕ್‌ನ ಗ್ಲೆನ್ಸ್ ಫಾಲ್ಸ್ ನಲ್ಲಿ ಮನೆಯೊಳಗೆ ಬೆಂಕಿ ಬಿದ್ದಿದೆ ಬೇಗ ಬನ್ನಿ ಎಂದು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮನವಿ ಮಾಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕದವರು ನಿಜಾಂಶ ತಿಳಿದು ನಿಟ್ಟುಸಿರುಬಿಟ್ಟಿದ್ದರು. ಏಕೆಂದರೆ ಅಲ್ಲಿ ಯಾವುದೇ ಅಗ್ನಿ ಅನಾಹುತ ನಡೆದಿರಲಿಲ್ಲ. ಬದಲಾಗಿ ಅದು ಹ್ಯಾಲೋವೀನ್ ಅಲಂಕಾರವಾಗಿತ್ತಷ್ಟೇ.

ಹ್ಯಾಲೋವೀನ್ ಉತ್ಸಾಹಿಯೊಬ್ಬರ ಅಲಂಕಾರಗಳು ನೆರೆಹೊರೆಯಲ್ಲಿ ಸಾಕಷ್ಟು ಕೋಲಾಹಲವನ್ನು ಉಂಟುಮಾಡಿತ್ತು. ಅಲಂಕಾರಗಳು ಯಾವ ರೀತಿ ಇತ್ತೆಂದರೆ ದಾರಿಹೋಕರು ಮನೆಯೊಳಗೆ ಬೆಂಕಿ ಬಿದ್ದಿದೆ ಎಂದು ಭಾವಿಸಿ ಗ್ಲೆನ್ಸ್ ಫಾಲ್ಸ್ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ರಕ್ಷಣಾ ತಂಡಕ್ಕೆ ಇದು ಜಾಣತನದಿಂದ ರಚಿಸಲಾದ ಹ್ಯಾಲೋವೀನ್ ಪ್ರದರ್ಶನವಾಗಿದೆ ಎಂದು ಗೊತ್ತಾಯಿತು.

ಕಿಟಕಿ ಮೂಲಕ ಮನೆಯನ್ನ ನೋಡಿದರೆ ಉರಿಯುತ್ತಿರುವ ಬೆಂಕಿಯ ಭ್ರಮೆಯನ್ನು ಸೃಷ್ಟಿಸುವ ಅಲಂಕಾರಗಳಿಂದ ಮಾಡಲಾಗಿತ್ತು. ಆದರೆ ವಾಸ್ತವಿಕ ದೃಶ್ಯವು ಸ್ಥಳೀಯರ ಆಲೋಚನೆಯನ್ನ ಸುಳ್ಳಾಗಿಸಿತು. ಯಾವುದೇ ನಿಜವಾದ ಬೆಂಕಿ ಅಥವಾ ಅಪಾಯ ನಡೆದಿರಲಿಲ್ಲ. ಇದನ್ನು ಉತ್ಸಾಹದ ರೂಪದಲ್ಲಿ ಸ್ವೀಕರಿಸಿದ. ಅಗ್ನಿಶಾಮಕ ಇಲಾಖೆ ತಮ್ಮ ಫೇಸ್‌ಬುಕ್ ಪುಟದಲ್ಲಿ ಪ್ರಭಾವಶಾಲಿ ಹ್ಯಾಲೋವೀನ್ ಅಲಂಕಾರಗಳ ವೀಡಿಯೊವನ್ನು ಹಂಚಿಕೊಂಡಿದೆ.

ವರ್ಷದ ಅತ್ಯಂತ ಭಯಾನಕ ರಜಾದಿನವನ್ನು ಆಚರಿಸುವ ಸಮರ್ಪಣೆಯ ದಿನವನ್ನಾಗಿ ಇದನ್ನು ಕೆಲವು ದೇಶಗಳಲ್ಲಿ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಭಾರತವೂ ಇದನ್ನು ಅಳವಡಿಸಿಕೊಳ್ಳುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read