BIG NEWS:‌ ನಟಿ ಪೂನಂ ಪಾಂಡೆ ನಿವಾಸದಲ್ಲಿ ಅಗ್ನಿ ಅವಘಡ

ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುವ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ವಾಸವಿರುವ ಮುಂಬೈನ ಬಹುಮಹಡಿ ಕಟ್ಟಡದಲ್ಲಿನ ಅವರ ಮನೆ ಅಗ್ನಿಗೆ ಆಹುತಿಯಾಗಿದೆ.

ಈ ಸಂದರ್ಭದಲ್ಲಿ ಪೂನಂ ಪಾಂಡೆ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಮನೆಯಲ್ಲಿ ಪೂನಂ ಸಾಕು ಶ್ವಾನ ಇತ್ತು ಎನ್ನಲಾಗಿದ್ದು, ಅದನ್ನು ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು ಅಗ್ನಿ ಅನಾಹುತಕ್ಕೆ ನಿಖರ ಕಾರಣ ಪತ್ತೆ ಮಾಡುತ್ತಿದ್ದಾರೆ. ಇದೇ ಕಾಲನಿಯಲ್ಲಿ ವಾಸ ಮಾಡುವ ರಾಜನ್​ ಬೆಂಕಿ ನಂದಿಸುವಲ್ಲಿ ಹಾಗೂ ಅಗ್ನಿಶಾಮಕ ದಳ ಇಲಾಖೆಗೆ ಕರೆ ಮಾಡಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

ಬಹುಮಹಡಿ ಕಟ್ಟಡದ 16ನೇ ಮಹಡಿಯಲ್ಲಿ ಪೂನಂ ಪಾಂಡೆ ವಾಸವಿದ್ದಾರೆ. ಪೂನಂ ಪಾಂಡೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಮನೆಯಲ್ಲಿ ನಡೆದ ಅಗ್ನಿ ಅವಘಡದ ಬಗ್ಗೆ ಮಾಹಿತಿ ಶೇರ್​ ಮಾಡಿದ್ದಾರೆ.

ರಾತ್ರಿ ನಮ್ಮ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನನ್ನ ಮಗ (ಸೀಸರ್​ ಶ್ವಾನ) ಹಾಗೂ ನಾನು ಚೆನ್ನಾಗಿದ್ದೇವೆ. ಈ ಘಟನೆ ಸಂಬಂಧ ನನಗೆ ಸಾಕಷ್ಟು ಕರೆಗಳು ಬಂದಿವೆ, ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೂನಂ ಪಾಂಡೆ ಬೆಡ್​​ ರೂಮಿನಲ್ಲಿ ಬೆಂಕಿ ಹೊತ್ತಿಕೊಂಡ ವಿಡಿಯೋವನ್ನೂ ಶೇರ್​ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read