ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಫೈರ್ ಬ್ರ್ಯಾಂಡ್ ‘ಚೈತ್ರಾ ಕುಂದಾಪುರ’ ಔಟ್ ..?

ಬೆಂಗಳೂರು : ಕಳೆದ ಭಾನುವಾರದಿಂದ ಬಿಗ್ ಬಾಸ್ ಸೀಸನ್ 11 ಆರಂಭವಾಗಿದ್ದು , ಸ್ಪರ್ಧಿಗಳ ಅಸಲಿ ಆಟ ಶುರುವಾಗಿದೆ.

ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಔಟ್ ಆಗಲಿದ್ದಾರಾ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಹೌದು. ಚೈತ್ರಾ ಕುಂದಾಪುರ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸುವಂತೆ ಕಲರ್ಸ್ ಕನ್ನಡ ಚಾನಲ್ ಗೆ ನೊಟೀಸ್ ನೀಡಲಾಗಿದೆ.

ವಕೀಲ ಭೋಜರಾಜ್ ಎನ್ನುವವರು ಚೈತ್ರ ಕುಂದಾಪುರ್ ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊಇರ ಕಳುಹಿಸಬೇಕು. ಇಲ್ಲವಾದರೆ ವಾಹಿನಿ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
ಚೈತ್ರಾ ಕುಂದಾಪುರ ವಿರುದ್ಧ ಹಲವು ಪ್ರಕರಣಗಳು ಇವೆ. ವರ್ಷದ ಹಿಂದಷ್ಟೇ ಖ್ಯಾತ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಚುನಾವಣಾ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂಪಾಯಿ ಹಣ ವಂಚಿಸಿದ್ದರು. ಪ್ರಕರಣ ದಾಖಲಾಗಿ ಪೊಲೀಸರು ಚೈತ್ರಾ ಹಾಗೂ ಸಹಚರರಿಂದ 5 ಕೋಟಿ ಹಣ ವಸೂಲಿ ಮಾಡಿದ್ದಾರೆ. ಕ್ಷಣ ಚೈತ್ರಾ ಕುಂದಾಪುರಳನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಿ. ಈ ಬಗ್ಗೆ ಈಗಾಗಲೇ ಕಲರ್ಸ್ ಕನ್ನಡಕ್ಕೆ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ನಲ್ಲಿ ಕಾನೂನು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ವಕೀಲ ಭೋಜರಾಜ್ ಎಚ್ಚರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read