BIG NEWS: ಜೆಡಿಎಸ್ ಮುಖಂಡನ ತೋಟಕ್ಕೆ ಬೆಂಕಿ; ಅಪಾರ ಪ್ರಮಾಣದ ಬೆಳೆಗಳು ಬೆಂಕಿಗಾಹುತಿ

ಮೈಸೂರು: ಜೆಡಿಎಸ್ ಮುಖಂಡ ಪ್ರಭಾಕರ ಅವರ ತೋಟಕ್ಕೆ ಬೆಂಕಿ ಬಿದ್ದಿದ್ದು, ಅಡಿಕೆ, ತೆಂಗು, ತೇಗದ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿ ಚೌಡಿಕಟ್ಟೆ ರಸ್ತೆಯ ತೋಟದಲ್ಲಿ ಸಂಭವಿಸಿದೆ.

ರಾಜಕೀಯ ಧ್ವೇಷದಿಂದಾಗಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. 6 ಎಕರೆ ಪ್ರದೇಶದ ತೋಟದಲ್ಲಿ ಹಲವು ಬಗೆಯ ಮರಗಳನ್ನು ಬೆಳೆಸಲಾಗಿತ್ತು. 6 ತೆಂಗು, 25 ತೇಗ, 50 ಅಡಿಕೆ ಮರಗಳು ಸುಟ್ಟು ಕರಕಲಾಗಿವೆ. ನಾಲ್ಕು ಲಕ್ಷಕ್ಕೂ ಅಧಿಕಕ ನಷ್ಟವುಂಟಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ದ್ಧಾವಿಸಿ ಬೆಂಕಿ ನಂದಿಸಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read