ರಾಯಚೂರು: ಅನಧಿಕೃತವಾಗಿ ಚೆಕ್ಪೋಸ್ಟ್ ತೆರೆದು ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿರುವ ಆರೋಪದ ಮೇಲೆ ರಾಯಚೂರು ಜಿಲ್ಲೆ ದೇವದುರ್ಗ ಎಪಿಎಂಸಿ ಅಧ್ಯಕ್ಷ, ಕಾರ್ಯದರ್ಶಿ ಸೇರಿ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೇವದುರ್ಗದ ತಿಂಥಿಣಿ ಬ್ರಿಡ್ಜ್ ಸಮೀಪ ಅನಧಿಕೃತ ಚೆಕ್ಪೋಸ್ಟ್ ನಿರ್ಮಿಸಿ ಭತ್ತದ ಲಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅನಧಿಕೃತ ಕೃಷಿ ಉತ್ಪನ್ನ ಸಾಗಣೆ ನಿಯಂತ್ರಣಕ್ಕೆ ಎಪಿಎಂಸಿಯಿಂದ ಯಾವುದೇ ಚೆಕ್ ಪೋಸ್ಟ್ ತೆರೆಯುತ್ತಿದ್ದರು. ಹಣವಸೂಲಿ ಮಾಡುತ್ತಿದ್ದಾರೆ ಎಂದು ಉಪಾಧ್ಯಕ್ಷ ಅಬ್ದುಲ್ ಅಜಿಜ್ ದೂರು ನೀಡಿದ್ದಾರೆ.
ಒಂದು ಲಾರಿಯಿಂದ ನೂರು ರೂಪಾಯಿಯಂತೆ ಪ್ರತಿದಿನ ಐದರಿಂದ ಆರು ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಇದರಲ್ಲಿ ಒಂದು ಸಾವಿರ ರೂಪಾಯಿ ಕೆಲಸಗಾರರಿಗೆ ನೀಡಿ ಉಳಿದ ಹಣವನ್ನು ಅಧ್ಯಕ್ಷ, ಕಾರ್ಯದರ್ಶಿ ಪಡೆಯುತ್ತಿದ್ದಾರೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ಉಪಾಧ್ಯಕ್ಷರು ದೂರು ನೀಡಿದ್ದಾರೆ.
