ದಾವಣಗೆರೆ: ಸಾಲಗಾರರ ಕಿರುಕುಳಕ್ಕೆ ಬೇಸತ್ತ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾಚಿಗೊಂಡನಹಳ್ಳಿಯಲ್ಲಿ ನಡೆದಿದೆ.
ಯಶ್ವಂತ್ (24) ಆತ್ಮಹತ್ಯೆಗೆ ಶರಣಾದ ಯುವಕ. ಮನೆ ಜಪ್ತಿ ಮಾಡುವುದಾಗಿ ಫೈನಾನ್ಸ್ ಸಿಬ್ಬಂದಿ ಬೆದರಿಕೆಯೊಡ್ಡಿದ್ದರು. ಇದರಿಂದ ಮನನೊಂದ ಯಶ್ವಂತ್ ಸಾವಿಗೆ ಶರಣಾಗಿದ್ದಾನೆ.
ಫೈನಾನ್ಸ್ ವೊಂದರಲ್ಲಿ ಯಶ್ವಂತ್ 5 ಲಕ್ಷ ಸಾಲ ಪಡೆದಿದ್ದ. ಅಲ್ಲದೇ ಸುನೀಲ್ ನಾಯ್ಕ್ ಎಂಬುವವರ ಬಳಿ ೪೦ ಸಾವಿರ ರೂಪಾಯಿ ಸಾಲ ಪಡೆದಿದ್ದ. ಹಣ ವಾಪಸ್ ಕೊಡದಿದ್ದಕ್ಕೆ ಸುನೀಲ್ ನಾಯ್ಕ್ ಗಲಾಟೆ ಮಾಡಿದ್ದ. ಇದರಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಯಶ್ವಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಶ್ವಂತ್ ತಾಯಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.