BREAKING : ರಾಜ್ಯ ಸರ್ಕಾರದಿಂದ ‘PSI’ ( ಸಿವಿಲ್) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ಪಿಎಸ್ ಐ ( ಸಿವಿಲ್) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಂಡಿದೆ. ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

  1. ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ಹಾಗೂ ಸೇವಾನಿರತ ಮಿಕ್ಕುಳಿದ ವೃಂದದ ಮತ್ತು ಕಲ್ಯಾಣ ಕರ್ನಾಟಕ ಹುದ್ದೆಗಳ ನೇಮಕಾತಿಯನ್ನು ಉಲ್ಲೇಖ(1)ರ ಅಧಿಸೂಚನೆಯನ್ವಯ ಕೈಗೊಳ್ಳಲಾಗಿರುತ್ತದೆ. ಸದರಿ ಹುದ್ದೆಗಳ ನೇಮಕಾತಿ ಸಲುವಾಗಿ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ನಡೆಸಿದ ನಂತರ ಸದರಿ ಪರೀಕ್ಷೆಗಳಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ದಿನಾಂಕ: 03.10.2021 ರಂದು ನಡೆಸಿ, ಪೂರ್ಣಗೊಳಿಸಲಾಗಿರುತ್ತದೆ.
  2. ವೃಂದ ಮತ್ತು ನೇಮಕಾತಿ (ತಿದ್ದುಪಡಿ) ನಿಯಮಗಳು, 2009, 2016 ಮತ್ತು 2020 ರಲ್ಲಿನ ನಿಯಮಗಳನ್ವಯ ಮೇಲ್ಕಂಡ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನೇಮಕಾತಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಹುದ್ದೆಗಳಂತೆ ಮೆರಿಟ್ ಹಾಗೂ ಮೀಸಲಾತಿಯನುಸಾರ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಉಲ್ಲೇಖ(2)ರನ್ವಯ ಪ್ರಕಟಿಸಲಾಗಿರುತ್ತದೆ. ನಂತರ ಸದರಿ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಅಧಿಸೂಚನೆಯಲ್ಲಿ ಅಧಿಸೂಚಿಸಲಾದ ಹುದ್ದೆಗಳನುಸಾರ ಘಟಕವಾರು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಉಲ್ಲೇಖ(3)ರನ್ವಯ ಪ್ರಕಟಿಸಿ, ಸದರಿ ಘಟಕಗಳಿಂದ ಆಯ್ಕೆಯಾದ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿಗಳ ಪರಿಶೀಲನಾ ವರದಿಗಳನ್ನು ಕಳುಹಿಸುವಂತೆ ಸೂಚಿಸಲಾಗಿರುತ್ತದೆ.
  3. ಸದರಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ಕಂಡು ಬಂದ ಹಿನ್ನೆಲೆಯಲ್ಲಿ ದಾಖಲಾದ ಪ್ರಕರಣಗಳನ್ನು ಸಿ.ಐ.ಡಿ. ವತಿಯಿಂದ ತನಿಖೆ ನಡೆಸಲಾಗಿದ್ದು, ಸಿ.ಐ.ಡಿ. ವರದಿಯಲ್ಲಿ ಮಾಡಲಾದ ಶಿಫಾರಸ್ಸುಗಳ ಪ್ರಕಾರ ಕರ್ನಾಟಕ ಸರ್ಕಾರವು ಉಲ್ಲೇಖ(4)ರನ್ವಯ ದಿನಾಂಕ: 03.10.2021 ರಂದು ನಡೆದ ಲಿಖಿತ ಪರೀಕ್ಷೆಯನ್ನು ರದ್ದುಗೊಳಿಸಿ, ಮರು ಲಿಖಿತ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿರುತ್ತದೆ. ಸದರಿ ಸರ್ಕಾರದ ಆದೇಶದನ್ವಯ ಅಸಮಾಧಾನಗೊಂಡ ಕೆಲವು ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದು, ಸದರಿ ಅರ್ಜಿಗಳು ವಜಾಗೊಂಡಿರುತ್ತದೆ. ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯು ನೀಡಿರುವ ಆದೇಶವನ್ನು ಪ್ರಶ್ನಿಸಿ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ವಿವಿಧ ರಿಟ್ ಅರ್ಜಿಗಳನ್ನು ಸಲ್ಲಿಸಲಾಗಿರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯವು ಈ ವಿಷಯವನ್ನು ಆಲಿಸಿದ ನಂತರ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಆದೇಶವನ್ನು ಎತ್ತಿಹಿಡಿದು ಉಲ್ಲೇಖ(5)ರನ್ವಯ ಈ ಕೆಳಕಂಡಂತೆ ನಿರ್ದೇಶಿಸಲಾಗಿರುತ್ತದೆ.
    (i) Writ Petitions are dismissed;
    (ii) To ensure fair re-examination, the State Government shall entrust the process of re-examination to an independent agency without charging any fresh fee to the candidates.
    (iii) No costs.
  4. ದಿನಾಂಕ: 10.11.2022 ರಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ, ಕರ್ನಾಟಕ ಸರ್ಕಾರವು ಲಿಖಿತ ಪರೀಕ್ಷೆಯನ್ನು ಮರು ನಿರ್ವಹಿಸುವಂತೆ ಉಲ್ಲೇಖ(6)ರನ್ವಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿ ಆದೇಶಿಸಿರುತ್ತದೆ. ಅದರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಉಲ್ಲೇಖ(7)ರಂತೆ ದಿನಾಂಕ: 23.01.2024 ರಂದು ಲಿಖಿತ ಪರೀಕ್ಷೆಯನ್ನು ನಡೆಸಿ, ಉಲ್ಲೇಖ(8)ರನ್ವಯ ಅಂತಿಮ ಅಂಕಪಟ್ಟಿಯನ್ನು ಪ್ರಕಟಿಸಿರುತ್ತದೆ.
  5. ಸದರಿ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವ ಬಗ್ಗೆ ಉಲ್ಲೇಖ(9)ರಲ್ಲಿ ಸರ್ಕಾರದಿಂದ ನಿರ್ದೇಶನ ಹಾಗೂ ಸ್ಪಷ್ಟಿಕರಣವನ್ನು ಕೋರಲಾಗಿದ್ದು, ಈ ನಿಟ್ಟಿನಲ್ಲಿ ಉಲ್ಲೇಖ(10) ರನ್ವಯ ಸರ್ಕಾರವು ಈ ಕೆಳಕಂಡಂತೆ ನಿರ್ದೇಶನವನ್ನು ನೀಡಿರುತ್ತದೆ.
  6. ಸರ್ಕಾರದ ಪತ್ರ ಸಂಖ್ಯೆ: ಹೆಚ್ಡಿ/76/ಪಿಇಎಂ/2024 ದಿನಾಂಕ: 18.10.2024ರಲ್ಲಿ “545 ಪಿ.ಎಸ್.ಐ. (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಕುರಿತಂತೆ ಆಯ್ಕೆ ಪಟ್ಟಿಯನ್ನು ದಿನಾಂಕ: 01.02.2023ರ ಸುತ್ತೋಲೆಯನ್ವಯ ತಯಾರಿಸಿ ಈ ಕೆಳಕಂಡಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿರುತ್ತದೆ.
    6.1. ದಿನಾಂಕ: 06.06.2020ರ ಸುತ್ತೋಲೆಯನ್ವಯ ಆಯ್ಕೆ ಪಟ್ಟಿಯಿಂದ ಹೊರಗುಳಿಯುವ 40 ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗನುಗುಣವಾಗಿ 40 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ ಕಾಯ್ದಿರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವುದು.
    6.2. ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಸಂದರ್ಭದಲ್ಲಿ ಈ ಆಯ್ಕೆ ಪಟ್ಟಿಯು ಮಾನ್ಯ ಉಚ್ಚ ನ್ಯಾಯಾಲಯವು రిటో 20:16343/20240 ನೀಡುವ ಅಂತಿಮ ತೀರ್ಪಿಗೊಳಪಟ್ಟಿರುತ್ತದೆಂದು ಹಾಗೂ ಈ ಆಯ್ಕೆ ಪಟ್ಟಿಯಲ್ಲಿ ವೃಂದ ಬದಲಾವಣೆ, ಮೀಸಲಾತಿ ಪ್ರವರ್ಗ ಬದಲಾವಣೆ. ಅರ್ಹತಾ ಪಟ್ಟಿಯಲ್ಲಿನ ಸ್ಥಾನ ಮತ್ತು ಘಟಕಗಳ ಬದಲಾವಣೆ ಆಗುವ ಸಾಧ್ಯತೆಗೊಳಪಟ್ಟಿರುತ್ತದೆ ಎಂಬ ಷರತ್ತುಗಳನ್ನು ವಿಧಿಸುವುದು.”
  7. ಉಲ್ಲೇಖ(10)ರ ಸರ್ಕಾರದ ಪತ್ರದಲ್ಲಿ ನಿರ್ದೇಶಿಸಿರುವಂತೆ 505 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಿ, ಉಲ್ಲೇಖ(11)ರನ್ವಯ ದಿನಾಂಕ: 21.10.2024 ರಂದು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿರುತ್ತದೆ. ನಂತರ ಘಟಕವಾರು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಉಲ್ಲೇಖ(12)ರನ್ವಯ ಪ್ರಕಟಿಸಿ, ಸದರಿ ಅಭ್ಯರ್ಥಿಗಳಿಗೆ ನಿಯಮಾನುಸಾರ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆಯನ್ನು ನಡೆಸಿ ವರದಿಯನ್ನು ಈ ಕಛೇರಿಗೆ ಸಲ್ಲಿಸುವಂತೆ ಸಂಬಂಧ ಪಟ್ಟ ಘಟಕಗಳಿಗೆ ಸೂಚಿಸಲಾಗಿರುತ್ತದೆ.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read