ಪಿಜಿ ವೈದ್ಯಕೀಯ ಪ್ರವೇಶ: ನಾಳೆಯೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚನೆ

ಬೆಂಗಳೂರು: PG Medical ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ಅಂತಿಮ ಫಲಿತಾಂಶವನ್ನು KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಫೆ.28ರೊಳಗೆ ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.

ಉಚ್ಚ ನ್ಯಾಯಾಲಯದ ಆದೇಶದ ಅನ್ವಯ 3 ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಪ್ರಾಧಿಕಾರದ ಕೌನ್ಸಿಲಿಂಗ್‌ ನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ. ಆದರೆ ದಿನಾಂಕ 25-02-2025 ರಂದು ಪ್ರಕಟಿಸಲಾದ ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ಅಂತಿಮ ಪಟ್ಟಿಯಲ್ಲಿ ಎಂಸಿಸಿ ಯ 3 ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಐದು ಅಭ್ಯರ್ಥಿಗಳು ತಾಂತ್ರಿಕ ಕಾರಣಗಳಿಂದಾಗಿ ಸೇರ್ಪಡೆಯಾಗಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಪ್ರಕಟವಾದ ಅಂತಿಮ ಸೀಟು ಹಂಚಿಕೆಯ ಪಟ್ಟಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆದು, ಸದರಿ ಐದು ಅಭ್ಯರ್ಥಿಗಳ ಸೀಟು ಹಂಚಿಕೆಯನ್ನು ರದ್ದುಗೊಳಿಸಿ, ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯನ್ನು ಮರು ಹಂಚಿಕೆ ಮಾಡಿ ಪರಿಷ್ಕೃತ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಸಮಯದ ವೇಳಾಪಟ್ಟಿಯ ನಿಷ್ಠಾವಂತ ವಿಧೇಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕೌನ್ಸೆಲಿಂಗ್ ನಡೆಸಲು ಲಭ್ಯವಿರುವ ಸೀಮಿತ ಸಮಯವನ್ನು ಗಮನದಲ್ಲಿಟ್ಟುಕೊಂಡು, ಭಾಗವಹಿಸುವ ಎಲ್ಲಾ ಸಂಸ್ಥೆಗಳ ಕಾಲೇಜುಗಳಿಗೆ ಎಲ್ಲಾ ಶನಿವಾರ ಮತ್ತು ಭಾನುವಾರ ಮತ್ತು ಗೆಜೆಟೆಡ್ ರಜಾದಿನಗಳನ್ನು ಕೆಲಸದ ದಿನಗಳಾಗಿ ಪರಿಗಣಿಸಲು ನಿರ್ದೇಶಿಸಲಾಗಿದೆ.

ದೂರವಾಣಿ: 080-23 564 583

ಸಹಾಯವಾಣಿ: 080-23 460 460.

ಇ-ಮೇಲ್: keauthority-ka@nic.in

ವೆಬ್‌ಸೈಟ್: http://kea.kar.nic.in

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read