ಬೆಂಗಳೂರು: ಸಿನಿ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ಯೂಸ್ ನೀಡಿದೆ. ಇನ್ಮುಂದೆ ಮಲ್ಟಿಫ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಿಗೂ ಏಕರೂಪದ ದರ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿದೆ.
ರಾಜ್ಯದ ಎಲ್ಲಾ ಮಲ್ಟಿಫ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದರಿಗಳಲ್ಲಿ ಎಲ್ಲಾ ಭಾಷೆಯ ಚಿತ್ರಗಳಿಗೆ ಹಾಗೂ ಎಲ್ಲಾ ಪ್ರದರ್ಶನಗಳಿಗೆ ತೆರಿಗೆ ಹೊರತುಪಡಿಸಿ ಏಕರೂಪದ ಟಿಕೆಟ್ ದರ ಜಾರಿಗೆ ತರಲಾಗಿದೆ. ಚಿತ್ರಮಮ್ದಿರಗಳಲ್ಲಿ ಇನ್ಮುಂದೆ 200 ರೂಪಾಯಿ ಮೀರದಂತೆ ಟಿಕೆಟ್ ದರ ಇರುವಂತೆ ಸೂಚನೆ ನೀಡಲಾಗಿದೆ.
75 ಅಥವಾ ಅದಕ್ಕಿಂತ ಕಡಿಮೆ ಆಸನಗಳ ಪ್ರೊಮಿಯಂ ಸೌಲಭ್ಯವಿರುವ ಬಹುಪರದೆ ಚಿತ್ರಮಂದಿರಗಳನ್ನು ನಿಗದಿಪಡಿಸಿರುವ 200 ರೂಗಳ ಗರಿಷ್ಠದ ಟಿಕೆಟ್ ದರ ಮಿತಿಯಿಂದ ಹೊರಗಿಟ್ಟಿದೆ.
ಕರ್ನಾಟಕದಲ್ಲಿ ಮಲ್ಟಿಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ ಹೆಚ್ಚಿದ್ದ ಕಾರಣಕ್ಕೆ ಪ್ರೇಕ್ಷಕರು ಬರುತ್ತಿರಲಿಲ್ಲ. ಇದರಿಂದ ಟಿಕೆಟ್ ದರ ಕಡಿಮೆ ಮಾಡಿ, ಏಕರೂಪದ ಟಿಕೆಟ್ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.