ವಯನಾಡಿನಲ್ಲಿ ಭೂಕುಸಿತ ದುರಂತ; ನೆರವಿಗೆ ಮುಂದಾದ ಮಾಲಿವುಡ್ ಸ್ಟಾರ್ಸ್

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗುತ್ತಿದೆ. ತಮ್ಮವರನ್ನು ಕಳೆದುಕೊಂಡ ಅನೇಕರ ಕಣ್ಣೀರ ಒರೆಸಲು ಇಡೀ ದೇಶವೇ ಮುಂದಾಗಿದ್ದು ಹಲವು ನಟ-ನಟಿಯರು ಸಹ ವಯನಾಡಿನಲ್ಲಿ ಭೂಕುಸಿತದಿಂದ ನೋವಿನಲ್ಲಿರುವವರಿಗೆ ನೆರವಾಗಲು ಸಹಾಯ ಹಸ್ತ ಚಾಚಿದ್ದಾರೆ.

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೆಗಾಸ್ಟಾರ್ ಮಮ್ಮುಟ್ಟಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ್ದಾರೆ. ಅವರ ಪುತ್ರ, ಜನಪ್ರಿಯ ನಟ ದುಲ್ಕರ್ ಸಲ್ಮಾನ್ ಕೂಡ 15 ಲಕ್ಷ ರೂಪಾಯಿ ನೀಡುವ ಮೂಲಕ ತಮ್ಮ ಉದಾರತೆಯನ್ನು ತೋರಿಸಿದ್ದಾರೆ.

ಹೆಚ್ಚುವರಿಯಾಗಿ ಮಮ್ಮುಟ್ಟಿಯವರ ಚಾರಿಟಬಲ್ ಟ್ರಸ್ಟ್ ಭೂಕುಸಿತದಿಂದ ಸಂತ್ರಸ್ತರಿಗೆ ನೀಡಲು ಆಹಾರ, ಔಷಧ ಮತ್ತು ಬಟ್ಟೆಯಂತಹ ಅಗತ್ಯ ಸಾಮಗ್ರಿಗಳನ್ನು ಒದಗಿಸುತ್ತಿದೆ.

ವಯನಾಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಭೂಕುಸಿತದಲ್ಲಿ 300 ಜನರು ಸಾವನ್ನಪ್ಪಿದ್ದು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಇದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read