ಗಾಣಗಾಪುರ ದತ್ತಾತ್ರೇಯ ದೇವಾಲಯದಲ್ಲಿ ಹೊಡೆದಾಟ: ಅರ್ಚಕರ ವಿರುದ್ಧ ಎಫ್ಐಆರ್

ಕಲಬುರಗಿ: ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿಯೇ ಅರ್ಚಕರು ಹೊಡೆದಾಡಿಕೊಂಡಿದ್ದಾರೆ.

ದತ್ತ ಮಂದಿರದ ಪ್ರಾಂಗಣದಲ್ಲಿ ವಲ್ಲಭ ಪೂಜಾರಿ ಮೇಲೆ ಗುಂಡು ಪೂಜಾರಿ, ಕಿರಣ್ ಪೂಜಾರಿ ಹಲ್ಲೆ ನಡೆಸಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡಿದೆ. ಈ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ದೇವಸ್ಥಾನದ ಪೂಜಾ ಕೈಂಕರ್ಯವನ್ನು ಪ್ರತಿ ವರ್ಷ ಒಂದೊಂದು ಕುಟುಂಬಕ್ಕೆ ವಹಿಸುವ ಪದ್ಧತಿ ಇದೆ. ಈ ವರ್ಷ ವಲ್ಲಭ ಪೂಜಾರಿ ಕುಟುಂಬದ ಪೂಜಾ ಕೈಂಕರ್ಯ ನಿರ್ವಹಿಸುತ್ತಿದೆ. ಈ ನಡುವೆ ಗುಂಡು ಪೂಜಾರಿ, ಕಿರಣ್ ಪೂಜಾರಿ ಕಡೆಯವರನ್ನು ದೇವಾಲಯದ ಒಳಗೆ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ವಿಕೋಪಕ್ಕೆ ತಿರುಗಿ ಅರ್ಚಕರಾದ ವಲ್ಲಭ ಪೂಜಾರಿ ಮೇಲೆ ಭಕ್ತರ ಸಮ್ಮುಖದಲ್ಲಿಯೇ ಗುಂಡು ಪೂಜಾರಿ ಮತ್ತು ಕಿರಣ್ ಪೂಜಾರಿ ಹಲ್ಲೆ ಮಾಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಭಕ್ತರ ಸಮ್ಮುಖದಲ್ಲಿ ಹೊಡೆದಾಡಿಕೊಂಡಿದ್ದು, ದೇವಲ ಗಾಣಗಾಪುರ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read